ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ತಾ. ಮಟ್ಟದ ಚರ್ಚಾ ಸ್ಪರ್ಧೆ

Rashmi Kasaragodu
Updated On : 9 Nov 2013, 12:03 pm

ಚನ್ನರಾಯಪಟ್ಟಣ: ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆಯನ್ನು  ನ.9ರಂದು  ಬೆಳಗ್ಗೆ 9.30 ಕ್ಕೆ ನವೋದಯ ವಿದ್ಯಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿದೆ. ಆಡಳಿತದಲ್ಲಿ ಕನ್ನಡ ಬಳಕೆ ಮಾಡುವುದರಿಂದಲೇ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂಬ ವಿಷಯದ ಬಗ್ಗೆ ಪ್ರತಿ ಶಾಲೆಯಿಂದ ವಿಷಯದ ಪರ ಮತ್ತು ವಿರೋಧವಾಗಿ ಚರ್ಚಿಸಲು ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಹೇರಂಭ ಬಳಗದ ರಾಜ್ಯೋತ್ಸವ
ಚನ್ನರಾಯಪಟ್ಟಣ: ತಾಲೂಕಿನ ಮಟ್ಟನವಿಲೆ ಗ್ರಾಮದಲ್ಲಿ ಹೇರಂಭ ಸ್ನೇಹ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ  ಆಚರಿಸಲಾಯಿತು. ಗ್ರಾಮಪಂಚಾಯ್ತಿ ಸದಸ್ಯೆ ಪುಷ್ಪಾರಾಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರ ಬಗ್ಗೆ ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಾ.ಅರುಣ್ಕುಮಾರ್, ಸಂಘದ ಅಧ್ಯಕ್ಷ ಎಂ. ಜೆ. ಮಂಜುನಾಥ್, ಶಿಕ್ಷಕ ರಘು, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರವಿ, ಸಂಘದ ಉಪಾಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಎಂ. ಎನ್. ಸ್ವಾಮಿ, ಖಜಾಂಚಿ ಎಂ. ಕೆ. ಮಂಜುನಾಥ್, ಸದಸ್ಯ ಗುರುರಾಜ್, ಕಿರಣ್, ಉಮೇಶ್, ತಮ್ಮಯ್ಯ, ಅವಿನಾಶ್, ನರಸಮ್ಮ ಇದ್ದರು.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಆರಂಭ
ಅರಕಲಗೂಡು: 2013-14ನೇ ಸಾಲಿನ ಶಾಲೆ ಬಿಟ್ಟ ಮಕ್ಕಳ ಸಮೀಕ್ಷಾ ಕಾರ್ಯ ಬುಧವಾರ ಆರಂಭಗೊಂಡಿತು. ಶಾಲಾ ಹಂತದಲ್ಲಿ ಎರಡು ದಿನಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದೇ ತಿಂಗಳು 13ರಿಂದ 17ರವರೆಗೆ 5 ದಿನಗಳ ಕಾಲ ಮನೆಮನೆ ಸಮೀಕ್ಷಾ ಕಾರ್ಯ ನಡೆಯಲಿದೆ. ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಪೋಷಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ಮನವಿ ಮಾಡಿದ್ದಾರೆ. ಸಹಾಯವಾಣಿಗಾಗಿ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಆರ್.ರಮೇಶ್(9480695239), ಬಿಆರ್ಪಿ ಎಂ.ಸಿ.ಮಹದೇವಪ್ಪ(9964287672), ಅರಕಲಗೂಡು ಕ್ಷೇತ್ರ ಸಂಪನ್ಮೂಲ ಕೇಂದ್ರ 08175221566 ವನ್ನು ಸಂಪರ್ಕಿಸಬಹುದಾಗಿದೆ.
ಎಸ್ಡಿಎಂಸಿ ಅಧ್ಯಕ್ಷರ ಆಯ್ಕೆ
ರಾಮನಾಥಪುರ: ಇಲ್ಲಿಗೆ ಸಮೀಪದ ಬಾನುಗುಂದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಬಿ.ಜೆ.ರಮೇಶ್ ಹೊನೆಮನೆ ಆಯ್ಕೆಯಾಗಿದ್ದಾರೆ. ಈ ಶಾಲೆ ಮೂವರು ಶಿಕ್ಷರನ್ನು ಒಗೊಂಡಿದ್ದು,  40 ಮಕ್ಕಳನ್ನು ಹೊಂದಿದೆ.  ಬಿ.ಜೆ.ರಮೇಶ್ ಹೊನೆಮನೆ ಮಾತನಾಡಿ, ಈ ಶಾಲೆಯಲ್ಲಿ ಹಿಂದಿನಿಂದಲೂ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದು ಇನ್ನು ಮುಂದೆ ಶಾಲೆ ಇನ್ನಷ್ಟು ಪ್ರಗತಿ ಬಗ್ಗೆ ಸಹಕರಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement