ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉರುಳಿ ಬಿದ್ದ ಸಿಗ್ನಲ್ ಕಂಬ: ಸಂಚಾರಕ್ಕೆ ಅಡ್ಡಿ

Rashmi Kasaragodu
Updated On : 9 Nov 2013, 12:01 pm

ಹಾಸನ: ನಗರದ ಸಂತೇಪೇಟೆ ವೃತ್ತದಲ್ಲಿ ಇರುವ ಸಿಗ್ನಲ್ ಲೈಟ್ ಕಂಬ ರಸ್ತೆಗೆ ಉರುಳಿ ಬಿದ್ದು, ಕೆಲ ಕಾಲ ಸಂಚಾರಕ್ಕೆ ತೊಂದರೆಯಾಯಿತು.
ದಿನ ಕಳೆದಂತೆ ನಗರದಲ್ಲಿ ವಾಹನಗಳ ಓಡಾಟ ಹೆಚ್ಚಾಗಿ ಅಪಘಾತಗಳು ಕೂಡ ಹೆಚ್ಚು ಸಂಭವಿಸುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಲು ಮುಂದಾಗಿದೆ. ಆದರೆ ಸಂತೇಪೇಟೆ ವೃತ್ತದಲ್ಲಿ ಹಾಕಲಾಗಿದ್ದ ಸಿಗ್ನಲ್ ಲೈಟ್ ಕಂಬ ಕೆಳಗೆ ಬಿದ್ದಿದೆ. ಗಾಳಿ ಇಲ್ಲವೇ ಯಾವುದೋ ವಾಹನ ಡಿಕ್ಕಿ ಹೊಡೆದು ಕಂಬ ಬಿದ್ದಿರಬಹುದು ಎನ್ನಲಾಗಿದ್ದು, ರಸ್ತೆ ಮೇಲೆ ಕಂಬ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕಂಬ ರಸ್ತೆಗೆ ಬಿದ್ದು ಅನೇಕ ಗಂಟೆಗಳು ಕಳೆದರೂ ಅದನ್ನು ತೆರವುಗೊಳಿಸಿರಲಿಲ್ಲ. ಇದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement