ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಫಿ ತೋಟಗಳ ಮಾಲೀಕರ ಹಿತಕ್ಕೆ ವನವೃಕ್ಷ ಕಾಯ್ದೆ ಸರಳೀಕೃತ: ಸಚಿವ ರೈ

Rashmi Kasaragodu
Updated On : 9 Nov 2013, 12:00 pm

ಕ.ಪ್ರ. ವಾರ್ತೆ೤ ಸಕಲೇಶಪುರ೤ ನ. 8
ಕಾಫಿ ತೋಟಗಳ ಮಾಲೀಕರ ಹಿತರಕ್ಷಣೆಗಾಗಿ 1986ರ ವನವೃಕ್ಷ ಕಾಯ್ದೆಯನ್ನು ಸರಳೀಕರಣಗೊಳಿಸುವ ಮೂಲಕ ಟಿಂಬರ್ ಕಡಿಯಲು ಅವಕಾಶ ಕಲ್ಪಿಸಲಾಗವುದು ಎಂದು ಅರಣ್ಯ ಮಂತ್ರಿ ರಮಾನಾಥ್ ರೈ ಹೇಳಿದ್ದಾರೆ.
ಪಟ್ಟಣದ ಹಾಸನ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, 2007ರ ವನವೃಕ್ಷ ಕಾಯ್ದೆಯನ್ನು ಸರಕಾರ ಹಿಂದೆ ಪಡೆದ ಕಾರಣ 1986ರ ಕಾಯ್ದೆ ಅನುಷ್ಠಾನಕ್ಕೆ ಬಂದಿದ್ದು, ಎಕರೆಗೆ 5 ಮರಗಳನ್ನು ಕಡಿಯಲು ಮಾತ್ರ ಅವಕಾಶವಿದೆ. ಆದ್ದರಿಂದ ಈ ಕಾಯ್ದೆ ಸರಳೀಕರಣಗೊಳಿಸುವ ಮೂಲಕ ಬೆಳೆಗಾರರ ನೆರವಿಗೆ ಬರುವ ಉದ್ದೇಶ ಸರಕಾರಕ್ಕಿದ್ದು ಸರಳೀಕರಣ ಗೊಳಿಸುವ ಮುನ್ನ ಬೆಳೆಗಾರರ ಸಲಹೆ ಪಡೆಯಲಾಗುವುದು ಎಂದರು.
ಇದಕ್ಕೂ ಮುನ್ನ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಪ್ರದೀಪ್ ಮಾತನಾಡಿ, ತೋಟದಲ್ಲಿರುವ ಮರಗಳನ್ನು ಕಡಿಯಲು ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಮರಗಳ ಬದಲಿಗೆ ಸಿಲ್ವರ್ ಮಾತ್ರ ನೋಡಬೇಕಾಗುತ್ತದೆ. ಅತಿಯಾದ ಮರಗಳಿದ್ದರೆ ಕಾಫಿ ತೋಟದಲ್ಲಿ ಇಳುವರಿ ಕಡಿಮೆಯಾಗುವುದಲ್ಲದೆ ಮುಂದಿನ ದಿನಗಳಲ್ಲಿ ಗಿಡಗಳು ಸಹ ಬದುಕುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಬೆಳೆಗಾರರು ಕಾಫಿ ತೋಟದಲ್ಲಿರುವ ಎಲ್ಲ ಮರಗಳನ್ನು ನಾಶಗೊಳಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಬೆಳೆಗಾರರಾದ ಮರಗತ್ತೊರು ಉಮೇಶ್ ಮಾತನಾಡಿ, ಕಾಫಿ ತೋಟದಲ್ಲಿ ಬೆಳೆಗಾರರ ಕಾಳಜಿ ಇಲ್ಲದೆ ಯಾವುದೆ ಮರಗಳು ಬೆಳೆಯುವುದಿಲ್ಲ, ಸರ್ಕಾರ ನಮಗೆ ಭೂಮಿ ಮಂಜೂರು ಮಾಡಿ ಮೂರು ತಲೆಮಾರುಗಳೆ ಕಳೆದಿದ್ದು, ಇದುವರಗೆ ಮೂರು ಬಾರಿ ಟಿಂಬರ್ ಕಡಿಯಲಾಗಿದ್ದು, ಮತ್ತೆ ಮರಗಳು ಕಡಿಯ ಬೇಕಿದೆ. ಆದರೆ ಟಿಂಬರ್ ಕಡಿಯಲು ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಫಿ ತೋಟಗಳಲ್ಲಿ ಮರಗಳನ್ನು ಬೆಳೆಸುವುದು ಅಸಾದ್ಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಸಿ.ಸಿ, ಎಫ್. ದೀಪಕ್ ಶರ್ಮ, ಕಾಫಿ ತೋಟಗಳಲ್ಲಿರುವ ಮರಕಡಿಯದಂತೆ ಹಿಂದಿನ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿರುವುದರಿಂದ ಕಾನೂನು ತೊಡಕಾಗಿದ್ದು, ಬೆಳೆಗಾರರ ಅನುಕೂಲಕ್ಕೆ ಅಧಿಕಾರಿಗಳು ಹೆಚ್ಚಿನ ಪ್ರಯತ್ನ ನಡೆಸಿದ್ದಾರೆಂದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಕೆ  ಕುಮಾರಸ್ವಾಮಿ, ಎಪಿಸಿಸಿ ಎಫ್.ಆರ್.ಕೆ. ಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement