ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೌಕರರ ಮನೆಗೇ ಮೀಟರ್ ಇಲ್ಲ!

Rashmi Kasaragodu
Updated On : 9 Nov 2013, 12:00 pm

ಕ.ಪ್ರ.ವಾರ್ತೆ೤ ಹೊಳೆನರಸೀಪುರ೤ ನ.8
ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿ ಇಲಾಖೆಯನ್ನು ಸದೃಢಗೊಳಿಸಬೇಕಾದ ವಿದ್ಯುತ್ ಇಲಾಖೆಯೇ ತನ್ನ ಆಯ್ದ ನೌಕರರಿಗೆ ನೀಡಿರುವ ನೂತನ ಇಲಾಖಾ ವಸತಿ ಸಂಕೀರ್ಣದಲ್ಲಿನ ಮನೆಗಳಿಗೆ ಮೀಟರ್ ಅಳವಡಿಸಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿನಿಂದ ನೇರವಾಗಿ ಹಾಗೂ ಅನಧಿಕೃತವಾಗಿ ಬೇಕಾಬಿಟ್ಟಿ ವಿದ್ಯುತ್ ಬಳಸಲು ಅನುವು ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದಲ್ಲಿನ ಸೆಸ್ಕ್ ಇಲಾಖಾ ಕಚೇರಿ ಹಿಂಭಾಗದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಿಸಲಾದ 10 ಇಲಾಖಾ ವಸತಿ ಗೃಹಗಳನ್ನು, ಇಲಾಖೆಯ ಇಬ್ಬರು ಎಂಜಿನಿಯರ್ 8 ಲೈನ್ಮೆನ್ಗಳಿಗೆ ಹಂಚಲಾಗಿದೆ. ಮನೆಗಳನ್ನು ನಿರ್ಮಿಸಿ ವರ್ಷವೇ ಕಳೆದರೂ ಇತ್ತೀಚಿನವರೆಗೂ ಈ ವಸತಿ ಗೃಹಗಳನ್ನು ಯಾರಿಗೂ ನಿಗದಿಗೊಳಿಸದೇ ಹಾಗೆಯೇ ಉಳಿಸಲಾಗಿತ್ತು. ಆದರೆ ಈಗ್ಗೆ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಈ ವಸತಿ ಗೃಹಗಳನ್ನು ಇಲಾಖೆಯ ಆಯ್ದ ಕೆಲವೇ ನೌಕರರಿಗೆ ಹಂಚಲಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಳವು, ಅನಧಿಕೃತ ವಿದ್ಯುತ್ ಸಂಪರ್ಕ ಹಾಗೂ ಸೋರುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದಂಡ ವಿಧಿಸುವ ಇಲಾಖೆ ಅದೇ ತನ್ನ ಕಚೇರಿ ಹಿಂಬದಿಯಲ್ಲೇ ನಿರ್ಮಿಸಿರುವ ನೂತನ ವಸತಿ ಸಂಕೀರ್ಣಗಳಿಗೆ ವಿದ್ಯುತ್ ಮೀಟರ್ಗಳನ್ನು ಅಳವಡಿಸದೆ, ತನ್ನ ನೌಕರರು ಹಾಗೂ ಸಿಬ್ಬಂದಿಗೆ ಮನೆಗಳನ್ನು ವಿತರಿಸಿರುವುದಲ್ಲದೇ, ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಅನಧಿಕೃತವಾಗಿಯೋ, ಇಲ್ಲ ಗೊತ್ತಿದ್ದೂ ಗೊತ್ತಿಲ್ಲದೆಯೋ ಎನ್ನಬೇಕೋ. ಒಟ್ಟಿನಲ್ಲಿ ವಿದ್ಯುತ್ ಮೀಟರ್ ಅಳವಡಿಸದೇ 8 ಮನೆಗಳಿಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ನೀಡುವ ಔದಾರ್ಯವನ್ನಂತೂ ಇಲಾಖೆ ತೋರುತ್ತಿದೆ. ಸಾಮಾನ್ಯವಾಗಿ ಒಂದು ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಪ್ರಸ್ತುತ ಏನಿಲ್ಲವೆಂದರೂ ಸುಮಾರು ನಾಲ್ಕು ಸಾವಿರದಷ್ಟಾದರೂ ಖರ್ಚಾಗುತ್ತದೆ. ಅದೂ ಯಾವುದಾದರೂ ವಿದ್ಯುತ್ ಗುತ್ತಿಗೆದಾರನನ್ನು ಹಿಡಿದು ತಿರುಗಿದರೆ ಕೆಲಸ ಬೇಗ ಆಗಬಹುದೇನೊ. ಇಲ್ಲವೆಂದಲ್ಲಿ ವಿಳಂಬವಂತೂ ತಪ್ಪಿದ್ದಲ್ಲ.
ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಏನಿಲ್ಲವೆಂದರೂ 250 ರಿಂದ 300 ರು. ಗಳಾದರೂ ಈಗಿನ ದುಬಾರಿ ವಿದ್ಯುತ್ ದರದನ್ವಯ ಒಂದು ಮನೆಗೆ ವಿದ್ಯುತ್ ಬಿಲ್ ಬರುವುದು ಸಾಮಾನ್ಯ ಸಂಗತಿ. ಈ ರೀತಿಯಲ್ಲಿ ಒಟ್ಟು ಎಂಟು ಮನೆಗಳ ವಿದ್ಯುತ್ ಬಿವ್ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಇಲಾಖೆಗೆ ಪಾವತಿಯಾಗಿಲ್ಲ. ಹೀಗಿರುವಾಗ ವಿದ್ಯುತ್ ಇಲಾಖೆ ತನ್ನ ಮಡಿಲಿನಲ್ಲಿಯೇ ವಿದ್ಯುತ್ ಕಳವು ಹಾಗೂ ಸೋರಿಕೆಯನ್ನು ತಡೆಗಟ್ಟದೆ, ಇಲಾಖೆಗೆ ನಷ್ಟವನ್ನುಂಟು ಮಾಡುತ್ತಿದೆ. ಈಗ ನಡೆದಿರುವ ತಪ್ಪಿನ ಹೊಣೆ ಹೊರುವವರು ಯಾರು, ಮನೆಗಳನ್ನು ಕಟ್ಟಿರುವ ಗುತ್ತಿಗೆದಾರನೇ, ಮೀಟರ್ ಅಳವಡಿಸದೆಯೂ ಮನೆಗಳನ್ನು ವಿತರಿಸಿದ ಇಲಾಖೆಯೇ, ಆಗಿರುವ ನಷ್ಟವನ್ನು ತುಂಬುವವರು ಯಾರು ಎಂಬುದನ್ನು ರಾಜ್ಯದ ಇಂಧನ ಸಚಿವರೇ ಹೇಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement