ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಡಿವಾಳ ಸಮುದಾಯ ಭವನದ ನಾಮಫಲಕ ಅನಾವರಣ

Rashmi Kasaragodu
Updated On : 9 Nov 2013, 12:04 pm

ಅರಸೀಕೆರೆ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪರಿಶಿಷ್ಟ ಜಾತಿ ವರ್ಗ ಹಾಗೂ ಹಿಂದುಳಿದ ವರ್ಗದವರಿಗೆ ಸ್ವಾಭಿಮಾನಿಗಳಾಗಿ ತಮ್ಮ ಸ್ವಂತ ಸಮುದಾಯ ಭವನ ನಿರ್ಮಿಸಿಕೊಂಡು ಶುಭ ಕಾರ್ಯಗಳು ಹಾಗೂ ಸಭೆ ಸಮಾರಂಭಗಳನ್ನು ನಡೆಸಿಕೊಳ್ಳಲು ಅನುಕೂಲವಾಗುವಂತೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು ನಿವೇಶನಗಳನ್ನು ಈಗಾಗಲೇ ದಾನವಾಗಿ ನೀಡಿ ಹಲವಾರು ಸಮುದಾಯ ಭವನಗಳ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ.
 ಇದೀಗ ಶ್ರಮಿಕ ವರ್ಗಕ್ಕೆ ಸೇರಿದ ಕಾಯಕ ಜೀವಿಗಳಾದ ಮಡಿವಾಳ ಸಮಾಜದವರಿಗೆ ಅರಸೀಕೆರೆ ಪಟ್ಟಣದಲ್ಲ ಮೈಸೂರು ರಸ್ತೆ ಪಕ್ಕದಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ 36/ 80 ವಿಸ್ತೀರ್ಣವುಳ್ಳ  ಅತ್ಯಂತ ಬೆಲೆ ಬಾಳುವ ನಿವೇಶನವನ್ನು ಉದಾರವಾಗಿ ದಾನ ನೀಡಿದ್ದು  ಈ ನಿವೇಶವನ್ನು ತಾಲೂಕು ಮಡಿವಾಳ ಮಾಚಿ ದೇವಸಂಘದ ಅಧ್ಯಕ್ಷ  ಸಿ. ರಾಮಚಂದ್ರ ಅವರು ದಾನ ಪತ್ರ ವನ್ನು ಅಧಿಕೃತವಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.
 ಅತ್ಯಂತ ಕಡು ಬಡವರಾಗಿ ಕೂಲಿ ಮಾಡಿ ಜೀವನ ನಡೆಸುವ ಮಡಿವಾಳ ಸಮಾಜದವರು ಸ್ವಾವಲಂಬಿಗಳಾಗಿ   ತಮ್ಮದೇ ಆದ ಸ್ವಂತ ಸಮುದಾಯ ಭವನ ನಿರ್ಮಿಸಿ ಕೋಂಡು ಶುಭ ಕಾರ್ಯಗಳನ್ನು ನಡೆಸಲು  ಸ್ವಇಚ್ಛೆಯಿಂದ ಶಾಸಕ ಕೆ.ಎಂ. ಶಿವಲಿಂಗೇಗೌಡ ರು. ನಿವೇಶನವನ್ನು ದಾನ ನೀಡಿರುವುದಕ್ಕೆ  ಮಡಿವಾಳ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿರುವ ಅವರು ತಾಲೂಕಿನಲ್ಲಿ 7 ಸಾವಿರಕ್ಕೂ ಹೆಚ್ಚು ಮಡಿವಾಳ ಸಮಾಜದ ಬಂದು ಗಳಿದ್ದು ಎಲ್ಲರ ಸಹಕಾರದಿಂದ  ನೂತನ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement