ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಣ್ಣು ಪರೀಕ್ಷಿಸಿ ಪೋಷಕಾಂಶ ನೀಡಿ: ಪ್ರಭಾವತಿ ಸಲಹೆ

Rashmi Kasaragodu
Updated On : 9 Nov 2013, 12:01 pm

ಅರಸೀಕೆರೆ: ತಮ್ಮ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿಸಿ ಅದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುವ ಮೂಲಕ ಉತ್ತಮ ಬೆಳೆ ಬೆಳೆಯುವಂತೆ ಸಹಾಯಕ ಕೃಷಿ ಅಧಿಕಾರಿ ಪ್ರಭಾವತಿ ತಿಳಿಸಿದರು.
ತಾಲೂಕಿನ ಅಣ್ಣನಾಯಕನಹಳ್ಳಿ ಸಮೀಪ ರೈತ ಕ್ಷೇತ್ರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ರಾಗಿ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಭೂಚೇತನ ಯೋಜನೆಯಡಿ ರೈತರು ತಮ್ಮ ಜಮೀನುಗಳಲ್ಲಿ ಲಘು ಪೋಷಕಾಂಶಗಳಾದ ಜಿಪ್ಸಂ, ಜಿಂಕ್ಸ್ಲ್ಫೇಟ್, ಬೋರಾಕ್ಸ್ ಉಪಯೋಗಿಸಿ ವೈಜ್ಞಾನಿಕವಾಗಿ ಬೆಳೆ ಬೆಳೆಯಲು ಮುಂದಾದರೆ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಪದ್ಧತಿಯಿಂದ ರೈತರು ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೃಷಿ ಇಲಾಖೆಯಿಂದ  ನೀಡಲಾಗುವ ಗುಣಮಟ್ಟದ ಬಿತ್ತನೆ ಬೀಜದ ಬಳಕೆ, ಕಳೆ ನಿಯಂತ್ರಣ ಇತ್ಯಾದಿಗಳಿಂದ ಉತ್ಪಾದನೆ ಹೆಚ್ಚು  ಮಾಡಿಕೊಳ್ಳಬಹುದಾಗಿದೆ ಎಂದು ನುಡಿದರು. ಕೃಷಿ ಅಧಿಕಾರಿ ಕಾಂತರಾಜು ಮಾತನಾಡಿ, ರೈತರು ಅಧಿಕ ಇಳುವರಿ ಪಡೆಯಬೇಕಾದರೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಶಿಫಾರಸ್ಸಿನಂತೆ ರಸಗೊಬ್ಬರ ಭೂ ಚೇತನ ಪರಿಕರಗಳನ್ನು ಪರಿಣಾಮಕಾರಿಯಾಗಿ  ಬಳಸಿಕೊಳ್ಳುವ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.ರೈತ ಮುಖಂಡ ಸುಬ್ಬಾಬೋವಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀನಿವಾಸ, ಶಿವಮೂರ್ತಿ, ಬಸವರಾಜು, ಕೃಷ್ಣಸ್ವಾಮಿ, ರೈತ ಅನುವುಗಾರರಾದ ಬಸವರಾಜು, ಸತೀಶ್, ಶಿವಕುಮಾರ್, ಸುರೇಶ್, ರಾಜೇಶ್, ಲೋಕೇಶಮೂರ್ತಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement