ವಿವೇಕ ಜಯಂತಿ ಪೂರ್ವಭಾವಿ ಸಭೆ
ಆಲೂರು: ಸ್ವಾಮಿ ವಿವೇಕಾನಂದರು ದೇಶ ಕಂಡ ಮಹಾನ್ ಆದರ್ಶವಾದಿ. ಪ್ರತಿಯೊಬ್ಬರೂ ವಿವೇಕಾನಂದರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ತಹಸೀಲ್ದಾರ್ ಮಹಮ್ಮದ್ ಇಸಾಕ್ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿವೇಕಾನಂದರ ಆತ್ಮವಿಶ್ವಾಸ, ಕ್ರಿಯಾಶೀಲತೆಗಳು ಮಾನವನಲ್ಲಿ ಪರಿಪೂರ್ಣತೆಯನ್ನು ತರುತ್ತವೆ ಎಂದರು. ಪುರ ಪ್ರಮುಖರು, ನಾನಾ ಸಂಘಟನೆಯ ಮುಖಂಡರು ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.