ಹುಲ್ಲಿನ ಬಣವೆಗೆ ಬೆಂಕಿ
ರಾಮನಾಥಪುರ: ಇಲ್ಲಿಗೆ ಸಮೀಪದ ಹೊನಗಾನಹಳ್ಳಿಯ ಸಲೀಂ ಎಂಬಾತನಿಗೆ ಸೇರಿದ 6 ಎಕರೆ ಹುಲ್ಲಿನ ಬಣವೆಗೆ ಮಧ್ಯರಾತ್ರಿ ದುಷ್ಕರ್ಮಿಗಳು ಬೆಂಕಿ ಹಾಕಿದ್ದರಿಂದ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಇದರಿಂದಾಗಿ ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಕಷ್ಟದಲ್ಲಿ ಸಿಲುಕಿರುವ ರೈತನಿಗೆ ನೇರವಾಗಬೇಕೆಂದು ಆಗ್ರಹಿಸಿದ್ದಾರೆ. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಈ ಜಗದೀಶ್, ತಾಲೂಕು ಸಂಚಾಲಕ ಗೋವಿಂದೇಗೌಡ, ಗ್ರಾಮಸ್ಥರಾದ ಭರತ್ ಗೋವಿಂದರಾಜು, ಚನ್ನಯ್ಯ, ಜವರಾಯಿ, ರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.