ಇಂದು ಟಿಪ್ಪು ವೃತ್ತದಲ್ಲಿ ಭಾವಕ್ಯತೆ ದಿನಾಚರಣೆ
ಹಾಸನ: ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಜಯಂತಿ ಅಂಗವಾಗಿ ನ.10 ರಂದು ಚನ್ನರಾಯಪಟ್ಟಣದ ಟಿಪ್ಪು ವೃತ್ತದಲ್ಲಿ ಭಾವಕ್ಯತೆ ದಿನಾಚರಣೆ ಆಚರಿಸುವುದಾಗಿ ಕರ್ನಾಟಕ ಟಿಪ್ಪು ಸೇವಾ ಸಮಿತಿಯ ಸಯ್ಯದ್ ಸಮೀರ್ ಹುಸೇನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಟಿಪ್ಪು ಸೇವಾ ಸಮಿತಿ ಮತ್ತು ಟಿಪ್ಪು ವೇಲ್ಫೇರ್ ಯೂನಿಯನ್ ಆಶ್ರಯದಲ್ಲಿ ಅಂದು ಸಂಜೆ 6 ಕ್ಕೆ ಟಿಪ್ಪು ವೃತ್ತದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಎಚ್.ಎಸ್. ವಿಜಯಕುಮಾರ್, ಎಂ.ಎ. ಗೋಪಾಲಸ್ವಾಮಿ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಕುಸುಮ, ಶಿವಶಂಕರ್ಕುಂಟೆ ಇತರರು ಭಾಗವಹಿಸುವರು. ಸಂಘದ ಅಧ್ಯಕ್ಷ ಮುಬ್ಬಶೀರ್ ಅಹಮದ್, ಅಬ್ದುಲ್ ಅಕ್, ಜಬಿ ಉಲ್ಲಾ ಬೇಗ್, ವಕ್ತಾರ್ಪಾಷಾ, ಸಯ್ಯದ್ ಅರ್ಷದ್ಪಾಷಾ ಇದ್ದರು.