ಇಂದು ಲಯನ್ಸ್ನಿಂದ ನೇತ್ರ ಉಚಿತ ತಪಾಸಣೆ ಶಿಬಿರ
ಕ.ಪ್ರ.ವಾರ್ತೆ ಆಲೂರು ನ.9
ಪಟ್ಟಣದಲ್ಲಿ ನ.10 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ, ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಮಸೂರ ಅಳವಡಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ನೀಲೇಶ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಚಿ ಕಾಮಕೋಟಿ ಮೆಡಿಕಲ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಹಾಸನ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಸಹಕಾರದೊಂದಿಗೆ ಆಲೂರು ತಾ. ಆರೋಗ್ಯಾಧಿಕಾರಿ ಕಚೇರಿ ಪಪಂ ಆಲೂರು,ಮಲೆನಾಡು ವೃತ್ತಿ ನಿರತ ಛಾಯಾಗ್ರಾಹಕರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಆಶ್ರಯದಲ್ಲಿ ಬೆಳಗ್ಗೆ 9 ರಿಂದ 1ರ ವರೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಬಿರ ಏರ್ಪಡಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದರು.
ಶಿಬಿರದಲ್ಲಿ ಮುಖ್ಯವಾಗಿ ಮಕ್ಕಳಿಗೂ ತೊಂದರೆಯಿದ್ದಲ್ಲಿ ಉಚಿತವಾಗಿ ನೇತ್ರ ತಜ್ಞರ ಸಲಹೆ ಮತ್ತು ಚಿಕಿತ್ಸೆಯನ್ನು ನೀಡಲಾಗುವುದು. ಈಗಾಗಲೇ ಪ್ರತಿ ಗ್ರಾಮದಲ್ಲೂ ಈ ಬಗ್ಗೆ ಧ್ವನಿವರ್ಧಕ ಹಾಗೂ ಕರಪತ್ರದ ಮೂಲಕ ಪ್ರಚಾರ ಮಾಡಲಾಗಿದ್ದು ವಿಷಯ ತಿಳಿದವರು ಇತರರಿಗೂ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದರು.
ಚಿಕಿತ್ಸೆಗೆ ಅರ್ಹರಾದವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ,ಲೆನ್ಸ್ ಅಳವಡಿಕೆ, ಊಟ, ಸಾರಿಗೆ ಹಾಗು ವಸತಿ ವ್ಯವಸ್ತೆಯನ್ನು ಉಚಿತವಾಗಿ ನೀಡಲಾಗುವುದು ಪುನ- ಶಿಬಿರ ನಡೆದ ಸ್ಥಳಕ್ಕೆ ಕರೆತಂದು ಬಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9448741437,94482370339,9482370339 ಗೆ ಸಂಪರ್ಕಿಸಬೇಕಾಗಿ ಕೋರಿದರು.
ಕಾರ್ಯದರ್ಶಿ ರೇಣುಕಾ ಪ್ರಸಾದ್,ಖಚಾಂಜಿ ರಂಗನಾಥ,ನವೀನ್ ಇದ್ದರು.