ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿವೃತ್ತ ಶಿಕ್ಷಕ ಸತ್ಯನಾರಾಯಣ್ಗೆ ಶಿಷ್ಯರಿಂದ ಅಭಿಮಾನದ ಸಮ್ಮಾನ

Rashmi Kasaragodu
Updated On : 9 Nov 2013, 11:56 am

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿಯಲ್ಲಿ 1955ರಿಂದ 1967ರವರಗೆ ಜಿಲ್ಲಾ ಬೋರ್ಡ್ ಹೈಸ್ಕೂಲ್ನಲ್ಲಿ ನೆಚ್ಚಿನ ಗುರುವಾಗಿದ್ದ ಸಲ್ಲಿಸಿದ 85ರ ಹರೆಯದ ನಿವೃತ್ತ ಶಿಕ್ಷಕ ಕೆ.ಜಿ ಸತ್ಯನಾರಾಯಣ್ರವರಿಗೆ ಶಿಷ್ಯವೃಂದ  ಹೃದಯಪೂರ್ವಕ ಅಭಿನಂದನೆ ಸಲ್ಲಿಸಿತು.
 ನೆಚ್ಚಿನ ಗುರುಗಳನ್ನು ಅಲಂಕೃತ ತೆರೆದ ವಾಹನದಲ್ಲಿ ಶಿಷ್ಯಂದಿರು ಹಾಗೂ ಅವರ ಸಮೂಹ ನುಗ್ಗೇಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಅವರನ್ನು ಹೃದಯಪೂರ್ವಕವಾಗಿ ಗೌರವಿಸಲಾಯಿತು.
 ಶಿಷ್ಯಂದಿರಿಂದ ಕೆಜಿಎಸ್ ಎಂದು ಕರೆಸಿಕೊಂಡ 60ರ ವಯಸ್ಸು ದಾಟಿದ ಶಿಷ್ಯಂದಿರು ಗುರುಗಳಿಗೆ ನಮಸ್ಕರಿಸಲು ಮುಂದಾದ ಸಂದರ್ಭದಲ್ಲಿ ಅವರಲ್ಲಿ ಕೆಲವರನ್ನು ಶಾಲೆಯಲ್ಲಿ ಕರೆಯುತ್ತಿದ್ದ ಅಡ್ಡ ಹೆಸರಿನಲ್ಲಿಯೇ ಮಾತನಾಡಿಸಿದಾಗ ಅಂದಿನ ತಮ್ಮ ಹೆಸರನ್ನು ಇನ್ನೂ ತಾವು ಮರೆತಿಲ್ಲವೆ ಎಂದು ಗುರುಗಳಿಗೆ ನಾಚಿಕೆಯಿಂದಲೇ ಗಮನಕ್ಕೆ ತಂದ ಗುರು ಶಿಷ್ಯರ ಸಂಬಂಧ ಮಧುರವಾಗಿತ್ತು.
 ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಜಿ ಸತ್ಯನಾರಾಯಣ್ ಶಿಷ್ಯರು ತಮ್ಮನ್ನು ಕೆಲವೊಮ್ಮೆ ಮರೆಯಬಹುದು ತಾವಂತೂ ನುಗ್ಗೇಹಳ್ಳಿಯ ಸಿಹಿ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ. ತಮ್ಮ  ಜೀವನ ಶೈಲಿಯನ್ನು ಬದಲಿಸಿದ ಗ್ರಾಮವನ್ನು ತಾವು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನುಗ್ಗೇಹಳ್ಳಿಯ ಸವಿನೆನಪು ಸದಾ ಉಳಿಯಲು ತಾವು 10 ಸಾವಿರ ರು.ಗಳನ್ನು ಶಾಲೆಗೆ ನೀಡುತ್ತಿದ್ದು, ಇದರ ಬಡ್ಡಿಯಲ್ಲಿ ಬರುವ ಹಣದಿಂದ ತಮ್ಮ ಪತ್ನಿಯ ಸ್ಮರಣಾರ್ಥ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಬೇಕೆಂದು ಕೋರಿದರು.
ಪ್ರಶಸ್ತಿ ಪುರಸ್ಕೃತ ವೆಂಕಟಾಚಲ ಶಾಸ್ತ್ರಿ ಮಾತನಾಡಿ ಜೀವನದಲ್ಲಿ ಉತ್ತಮ ಸಲಹೆ ನೀಡಿ ಜೀವನದ ಸಾರ್ಥಕತೆಗೆ ಕಾರಣರಾದ ಗುರುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.   ಸಂಗೀತ ವಿದ್ವಾನ್ ಡಾ.ಆರ್.ಕೆ ಪದ್ಮನಾಭನ್ ರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಳೆಯ ವಿದ್ಯಾರ್ಥಿ ಸಮೂಹದ ಅಧ್ಯಕ್ಷ ಬೋರೇಗೌಡ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement