ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವನಮಹೋತ್ಸವಮೂಲಕ ರಾಜ್ಯೋತ್ಸವ

Rashmi Kasaragodu
Updated On : 9 Nov 2013, 11:57 am

ಬೇಲೂರು: ನಾಡು ನುಡಿಯ ಜತೆಗೆ ಪರಿಸರ ಸಂರಕ್ಷಣೆಯೂ ಅವಶ್ಯಕವಾಗಿದ್ದು ಹೆಚ್ಚು ಗಿಡಗಳನ್ನು ನೆಟ್ಟಷ್ಟೂ ಉತ್ತಮ ಪರಿಸರ ನಿರ್ಮಿಸಲು ಸಾಧ್ಯ ಎಂದು ಇಕೋ ಕ್ಲಬ್ ಸಂಚಾಲಕ ಆರ್.ಎಂ. ಪಾಟೀಲ್ ಹೇಳಿದರು.
 ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ರುದ್ರೇಶ್ ಮಾತನಾಡಿ ಗಿಡವನ್ನು ನೆಡುವ ಮೂಲಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
 ಶಾಲೆ ಮುಖ್ಯ ಶಿಕ್ಷಕ ಗಿರೀಶ್, ವಿಜ್ಞಾನ ಶಿಕ್ಷಕ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೇಶ್, ಜಯಂತಿ, ಸುರೇಶ್ನಾಯ್ಕ ಇತರರು ಇದ್ದರು.
'ನಾಡು-ನುಡಿ ಬಗ್ಗೆ ಆಸಕ್ತಿ ಕುಂಠಿತ'
ಬೇಲೂರು: ಇತ್ತೀಚಿನ ದಿನಗಳಲ್ಲಿ ನಾಡು -ನುಡಿ ಬಗ್ಗೆ ಜನ ಸಾಮಾನ್ಯರಲ್ಲಿ ಆಸಕ್ತಿ  ಕಡಿಮೆಯಾಗುತ್ತಿದ್ದು ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಭಾಷಾಭಿಮಾನ ಬಗ್ಗೆ ಆಸಕ್ತಿ ವಹಿಸಿದಲ್ಲಿ ಕನ್ನಡದ ಉಳಿವು ಸಾಧ್ಯ ಎಂದು ಪುರಸಭಾ ಸದಸ್ಯ ಬಿ.ಗಿರೀಶ್ ತಿಳಿಸಿದರು.
 ಪಟ್ಟಣದ ಹೊಳೆಬೀದಿಯ ಬಾಪೂಜಿ ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಬಗ್ಗೆ ಮಾತನಾಡುವ ನಾವುಗಳು ಇನ್ನಿತರ  ದಿನಗಳಲ್ಲಿ ಕನ್ನಡ ವನ್ನು ಮರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟು ಕನ್ನಡ ಉಳಿಸಿ ಬೆಳೆಸುವಂತಹ ಕೆಲಸವನ್ನು  ಮಾಡಬೇಕಾಗಿದೆ. ಇದಕ್ಕೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ಕೊಟ್ಟು ಕೆಲಸ  ಮಾಡಿದ್ದೇ  ಆದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದರು.
 ಮಾಜಿ ಪುರಸಭಾ ಸದಸ್ಯ ಮಹಮದ್ ಫಾರೂಕ್ ಮಾತನಾಡಿದರು. ಪುನೀತ್ ನೇತೃತ್ವ ವಹಿಸಿದ್ದರು. ಶಂಕರಪ್ಪ, ಕೇಶವ, ರಂಗ, ತಾರಾನಾಥ್, ಪದ್ಮೇಗೌಡ ಇದ್ದರು.
ಪಪೂ ಕಾಲೇಜಿನಲ್ಲಿ ರಾಜ್ಯೋತ್ಸವ
ಹಾಸನ: ಕನ್ನಡಿಗರೆಲ್ಲ ಸಾಂಸ್ಕೃತಿಕವಾಗಿ  ಒಗ್ಗೂಡುವಂತಹ ವಾತಾವರಣ ನಿರ್ಮಾಣವಾದರೆ ಮಾತ್ರ ರಾಜ್ಯದಲ್ಲಿ  ಕನ್ನಡ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಎ.ವಿ.ಕೆ.ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಯತೀಶ್ವರ್ ತಿಳಿಸಿದರು.
 ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಅಪಾಯ ತಲುಪಿವೆ. ನಮ್ಮ ಮಕ್ಕಳು ಕನ್ನಡ ಶಾಲೆಗಳಿಗೆ  ವಿಮುಖವಾಗುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.  ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮೋಹನ್ ವಹಿಸಿದ್ದರು.
ತನಿಖೆಗೆ ಸಿದ್ಧ: ಸಮೀವುಲ್ಲಾ
ಅರಸೀಕೆರೆ: ಪುರಸಭೆ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಎಲ್ಇಡಿ ಬೀದಿದೀಪಗಳ ಖರೀದಿ ಹಾಗೂ ಅಳವಳಡಿಕೆಯಲ್ಲಿ ಅವ್ಯವಹಾರ ನಡೆದಿದ್ದರೆ ಯಾವುದೇ ತನಿಖೆ ನಡೆಸಿದರೂ ಸ್ವಾಗತಿಸುವುದಾಗಿ ಪುರಸಭಾ ಮಾಜಿ ಅಧ್ಯಕ್ಷ ಸಮೀವುಲ್ಲಾ ಘೋಷಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಸಭೆ ಮಾಜಿ ಸದಸ್ಯ ಎನ್.ಡಿ.ಪ್ರಸಾದ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಬೀದಿದೀಪ ಅಳವಡಿಕೆ ಕುರಿತಂತೆ ಗಂಭೀರ ಆರೋಪ ಮಾಡಿದ್ದಾರೆ. ಅವ್ಯವಹಾರ ನಡೆದಿದ್ದರೆ ತಾವು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಎದುರೇಟು ಹಾಕಿದರು.
ಇವರು ಸದಸ್ಯರಾಗಿದ್ದ ಸಂದರ್ಭದಲ್ಲಿ ಕಾಣದ ಅವ್ಯವಹಾರ, ಭ್ರಷ್ಟಾಚಾರಗಳು ಈಗ ಕಾಣಿಸುತ್ತಿರುವುದು ಹಾಸ್ಯಾಸ್ಪದ. ವಿರೋಧ ಪಕ್ಷದ ಪ್ರಮುಖರಾಗಿದ್ದ ಇವರು ತಮ್ಮ ಆಡಳಿತಾವಧಿಯಲ್ಲಿ ಈ ಬಗ್ಗೆ ಪ್ರಶ್ನಿಸಬಹುದಿತ್ತು. ಆದರೆ ಆಗ ಆರೋಪ ಮಾಡದ ಪ್ರಸಾದ್ ಇದೀಗ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement