ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಕಲಗೂಡುನಲ್ಲಿ ಬಿಜೆಪಿ ಜನಜಾಗರಣಾ ಅಭಿಯಾನ

Rashmi Kasaragodu
Updated On : 11 Nov 2013, 12:26 pm

ಅರಕಲಗೂಡು: ಕಾಂಗ್ರೆಸ್ ತೊಲಗಿಸಿ ದೇಶ ಉಳಿಸಿ ಮಂತ್ರದೊಂದಿಗೆ ಬಿಜೆಪಿ ಆರಂಭಿಸಿರುವ ಜನ ಜಾಗರಣಾ ಅಭಿಯಾನ ತಾಲೂಕಿನಲ್ಲಿ ಆರಂಭಗೊಂಡಿತು.ಇಲ್ಲಿನ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಕೇಶವೇಗೌಡ ಅಧ್ಯಕ್ಷತೆಯಲ್ಲಿ ಜಾಗರಣಾ ಅಭಿಯಾನದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ನಂತರ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ರಾಜ್ಯ ಕಾಂಗ್ರೆಸ್ ದುರಾಢಳಿತ ಮತ್ತು ಮೋದಿ ನಾಯಕತ್ವದ ಬಿಜೆಪಿ ಕುರಿತ ಕರಪತ್ರಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದರು.ಅಭಿಯಾನದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್,ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂಜಯ್,ಶಿವಣ್ಣ,ರೈತಮೋರ್ಚಾ ಅಧ್ಯಕ್ಷ ಪ್ರಕಾಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement