ಆಲೂರಿನಲ್ಲಿ ವಿವೇಕಾನಂದ ರಥಯಾತ್ರೆಗೆ ಸ್ವಾಗತ
ಆಲೂರು: ಪ್ರತಿಯೊಬ್ಬರೂ ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ತಹಸೀಲ್ದಾರ್ ಶಾರದಾಂಬ ತಿಳಿಸಿದರು.
ಅವರು ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ರಥ ಯಾತ್ರೆಯಲ್ಲಿ ವಿವೇಕಾನಂದರ ಭವ್ಯ ಮೂರ್ತಿಯನ್ನುಳಗೊಂಡ ರಥವನ್ನು ಸ್ವಾಗತಿಸಿ ಮಾತನಾಡಿ ವಿವೇಕಾನಂದರ ರಥಯಾತ್ರೆಯ ಪ್ರಮುಖ ಉದ್ದೇಶ ಯುವ ಜನಾಂಗದ ಸರ್ವತೊಮುಖ ಬೆಳವಣಿಗೆಗೆ ಬೇಕಾಗಿರುವ ಆದರ್ಶಪೂರ್ಣ ಬಹುಮುಖ ಪ್ರತಿಭೇಯ ಶ್ರೇಷ್ಠ ಶುದ್ಧ ಪ್ರಾಮಾಣಿಕ ಕೌಶಲ್ಯ ಪೂರ್ಣ ವ್ಯಕ್ತಿತ್ವವನ್ನು ಪರಿಚಯಿಸುವುದಾಗಿದೆ.
ಅವರ ಜೀವನೋಪದೆಶಗಳಿಂದ ಪ್ರಭಾವಿತರಾದ ಯುವಕರಲ್ಲಿ ಆತ್ಮವಿಶ್ವಾಸ,ಕ್ರಿಯಾಶೀಲತೆಗಳು ಹಾಗು ಪರಿಪೂರ್ಣತೆಯನ್ನು ತರುವುದಾಗಿದೆ ಎಂದರು.
ರಾಮಕೃಷ್ಣಾಶ್ರಮದ ಯುಕ್ತೇಶಾನಂದ ಸ್ವಾಮೀಜಿ ಮಾತನಾಡಿ, ನಿಮ್ಮ ಗ್ರಾಮ ಮತ್ತು ನಗರಗಳಲ್ಲಿ ರಥವನ್ನು ಬರ ಮಾಡಿಕೊಂಡು ಸ್ವಾಮಿ ವಿವೇಕಾನಂದರ ವಿಚಾರ ಧಾರೆಯನ್ನು ತಿಳಿಸಲು ಶ್ರಮಿಸಿ ರಥಯಾತ್ರೆಗೆ ಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕ ಹರಿಹರಪುರ ಶ್ರೀಧರ್,ಕಟ್ಟಾಯ ಶಿವಕುಮಾರ್, ಹೆಚ್.ಬಿ.ಧರ್ಮರಾಜ, ಜಯಕರ್ನಾಟಕ ಅಧ್ಯಕ್ಷ ಹನುಮಂತೇಗೌಡ, ಎಂ.ಬಿ. ವಿಜಯಕಾಂತ್, ಎ.ಹೆಚ್.ಲಕ್ಷ್ಮಣ್, ಕರವೇ ಮಧು, ಲಯನ್ಸ್ ಅಧ್ಯಕ್ಷ ನೀಲೇಶ್, ಕ್ಯಾಂಟೀನ್ ನಾಗರಾಜ,ಗುರುಸ್ವಾಮಿ, ವೈದ್ಯ ಜಯರಾಜ್ ಇತರರು ಇದ್ದರು.