ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಐರಾವತ್ ಬಸ್ ಡಿಕ್ಕಿ: ಪಾದಚಾರಿ ಸಾವು

Rashmi Kasaragodu
Updated On : 11 Nov 2013, 12:23 pm

ಹಾಸನ: ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಚನ್ನರಾಯಪಟ್ಟಣ ತಾ. ಗೌಡಗೆರೆ ಗ್ರಾಮದ ನಂಜೇಗೌಡ (48) ಸಾವನ್ನಪ್ಪಿದ ದುರ್ದೈವಿ. ಪಟ್ಟಣದ ಬಿ.ಎಂ.ರಸ್ತೆ ಪಕ್ಕದಲ್ಲಿ ಗ್ರಾಮದ ಮಂಜೇಶ ಮತ್ತು ಶೇಖರ ಮಾತನಾಡುತ್ತಾ ನಿಂತಿದ್ದಾಗ ಮಂಜೇಶ ರವರ ದೊಡ್ಡಪ್ಪ ನಂಜೇಗೌಡ ಅಂಗಡಿಯ ಹತ್ತಿರಕ್ಕೆ ಹೋಗಲು ರಸ್ತೆಯ ಪಕ್ಕ ನಡೆದುಕೊಂಡು ಹೋಗುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಐರಾವತ್ ಬಸ್ ಚಾಲಕನ ನಿರ್ಲಕ್ಷ್ಯತೆಯಿಂದ ನಂಜೇಗೌಡರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರ ಮುಖ ಹಾಗೂ ತಲೆಗೆ ತೀವ್ರ ಗಾಯವಾಗಿದ್ದು, ನಂಜೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ಮಂಜೇಶ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement