ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್ ಭವನದಲ್ಲಿ ಮೊದಲಬಾರಿ ಟಿಪ್ಪು ಜಯಂತ್ಯುತ್ಸವ

Rashmi Kasaragodu
Updated On : 11 Nov 2013, 12:26 pm

ಕನ್ನಡಪ್ರಭ ವಾರ್ತೆ, ಹಾಸನ. ನ 10
ಮೊಟ್ಟ ಮೊದಲ ಬಾರಿಗೆ ಟಿಪ್ಪು ಸುಲ್ತಾನ್ ಜಯಂತಿಯನ್ನು ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ಶಿವರಾಂ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಟಿಪ್ಪು ಜಯಂತಿ ಆಚರಿಸಲಾಯಿತು. ಕಾರ್ಯಕರ್ತರಿಗೆ ಸಿಹಿ ಹಂಚಲಾಯಿತು. ನಂತರ ಟಿಪ್ಪು ಸುಲ್ತಾನ್ ಜೀವನ ಚರಿತ್ರೆ, ಆದರ್ಶ ಗುಣಗಳನ್ನು ಸ್ಮರಿಸಲಾಯಿತು. ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮುಬಾಶೀರ್ ಅಹಮದ್, ಮುಖಂಡ ಎಸ್.ಎಂ.ಆನಂದ್, ರಣಜಿತಸಿಂಹನ್, ಮಹಂತೇಶ್, ವಿಜಯಕುಮಾರ್, ಫಜಲೂರು ರೆಹಮನ್, ಎಚ್.ಪಿ.ಮೋಹನ್, ಅಮೀರ್ಜಾನ್, ಕಡಾಕಡಿ ಪೀರ್ಸಾಹೇಬ್, ಬಾಲಶಂಕರ್, ರಫೀಕ್, ಸತೀಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement