ಗೆಳೆಯರ ಬಳಗದ ರಾಜ್ಯೋತ್ಸವ
ಜಾವಗಲ್: ಜಾವಗಲ್ನ ಬಿಸಿಸಿ ಗೆಳೆಯರ ಬಳಗದ ವತಿಯಿಂದ ನ. 25 ಮತ್ತು 26 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಇತ್ತೀಚೆಗೆ ಬಳಗದ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಅಧ್ಯಕ್ಷರಾಗಿ ಜೆ.ಜಿ. ಧರ್ಮೇಂದ್ರ ಗೌರವಾಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿ ಜಗನ್ನಾಥ, ಖಜಾಂಚಿಯಾಗಿ ಎಲ್.ಆರ್. ರಮೇಶ್, ಕಾರ್ಯಾಧ್ಯಕ್ಷ ಜೆ.ಸಿ. ನಾಗೇಶ, ಸಂಘಟನಾ ಕಾರ್ಯದರ್ಶಿಗಳಾಗಿ ಲೋಹಿತ್ ಪ್ರಶಾಂತ್, ಪುಟ್ಟೇಗೌಡ, ಸಂಚಾಲಕರಾಗಿ ವಿಶ್ವನಾಥ, ಲೋಕೇಶ, ಕೃಷ್ಣಮೂರ್ತಿ, ಲೋಕೇಶ ಬಾಬು, ಉಮೇಶ್ ಅವರುಗಳನ್ನು ಆಯ್ಕೆ ಮಾಡಲಾಯಿತು.