ವಿವೇಕಾನಂದರ ಭಾವಚಿತ್ರ, ಕರಪತ್ರ ಬಿಡುಗಡೆ
ಕನ್ನಡಪ್ರಭ ವಾರ್ತೆಹಾಸನ ನ 10
ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರದ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ವಿವೇಕಾನಂದರ ಭಾವಚಿತ್ರ ಮತ್ತು ಕರ ಪತ್ರವನ್ನು ಭಾನುವಾರ ಬಿಡುಗಡೆ ಮಾಡಿದರು.ಕರಪತ್ರ ಮತ್ತು ವಿವೇಕಾನಂದ ಭಾವಚಿತ್ರವನ್ನು ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಸಮಿತಿ ವಿಭಾಗದ ಕಾರ್ಯವಾಹಕ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಲಕ್ಷ್ಮಿನರಸಿಂಹ ಶಾಸ್ತ್ರಿ ಸ್ವಾಮೀಜಿಗೆ ನೀಡಿದರು. ಪ್ರತಿ ಮನೆ ಮನೆಗೂ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮಕ್ಕೂ ತೆರಳಿ ಸ್ವಾಮಿ ವಿವೇಕಾನಂದರ ಭಾವಚಿತ್ರ ಮತ್ತು ಕರಪತ್ರ ನೀಡುವ ಉದ್ದೇಶ ಹೊಂದಲಾಗಿದೆ. ನರೇಂದ್ರ ಮೋದಿ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಕಾರ್ಯಾಧ್ಯಕ್ಷ ಬಿ.ಕೆ.ಮಂಜುನಾಥ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್.ಕೃಷ್ಣೇಗೌಡ, ಮುಖಂಡರಾದ ನಾಗೇಶ್, ವಿಜಯಕುಮಾರ್, ಪ್ರಸನ್ನಕುಮಾರ್ ಇತರರು ಇದ್ದರು.
ಸಿ ಮ್ಯಾಟ್ ಪರೀಕ್ಷೆಗೆ ಅರ್ಜಿ ಆಹ್ವಾನ
ಹಾಸನ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುವ ಎಂಬಿಎ ಕಾಲೇಜುಗಳಲ್ಲಿ ಸಿ ಮ್ಯಾಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಎಐಸಿಟಿಇ 2ನೇ ಸಿಎಂಎಟಿ ಆನ್ಲೈನ್ ಪರೀಕ್ಷೆಯನ್ನು ಫೆಬ್ರವರಿ 20 ರಿಂದ 24 ರ ವರೆಗೆ ದೇಶದ ಕೆಲವು ನಗರಗಳಲ್ಲಿ ನಡೆಸಲಿದೆ. ಪದವೀಧರರು ಮತ್ತು ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವವರು ನ.1 ರಿಂದ ಜ.2 ರವರೆಗೆ ಆನ್ಲೈನ್ ಮೂಲಕ ಜಾಲ ತಾಣ ಢಿಢಿಢಿ.ಛ್ಝ್ಛಡಿಜ-್ಛಟಛಡಿ.್ಝಟಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 1200 ರು. (ಪಜಾ ಪಪಂ ಅಂ.ವಿ 600 ರು. ಪಾವತಿಸಬೇಕು.)
ಪ್ರವೇಶ ಪರೀಕ್ಷೆಯ ಮೂಲಕರ ಆಯ್ಕೆಯಾದರೆ ಉತ್ತಮ ಸಂಸ್ಥೆಯಲ್ಲಿ ಎಂಬಿಎ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಾಗುತ್ತದೆ. ಹಾಸನ ಜಿಲ್ಲೆಯ ಎಂಬಿಎ ಆಕಾಂಕ್ಷಿಗಳು ಹೆಚ್ಚಿನ ವಿವರಕ್ಕಾಗಿ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ ಅನ್ನು ಖುದ್ದಾಗಿ ಅಥವಾ ಮೊ 9845493336 ಸಂಪರ್ಕಿಸಿ ಪಡೆಯಲು ಕೋರಲಾಗಿದೆ.