'ಬದುಕು ಹಸನಾಗಲು ಆಧ್ಯಾತ್ಮಿಕ ಜಾಗೃತಿ ಬೇಕು'
ರಾಮನಾಥಪುರ: ಮನುಷ್ಯನ ಬದುಕು ಹಸನಾಗಬೇಕಾದರೆ ಆಧ್ಯಾತ್ಮಿಕ ಜಾಗೃತಿಯಿಂದ ಮಾತ್ರ ಸಾಧ್ಯ ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ರಾಮನಾಥಪುರ ಹತ್ತಿರವಿರುವ ಕರ್ತಾಳು ಗ್ರಾಮದ ಹೊಳೆಲಿಂಗೇಶ್ವರ ಮಂಟಪದಲ್ಲಿ ನಡೆದ ಮಾತೃನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜನನಿ ಜನ್ಮ ಭೂಮಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ತಾವು ತಮ್ಮ ತಂದೆ ತಾಯಿ ಇರುವಾಗಲೇ ಅವರ ಅರೋಗ್ಯ ಹಾಗೂ ಅವರ ಉತ್ತಮ ಕೆಲಸಗಳನ್ನು ಮಾಡಿರುವ ಬಗ್ಗೆ ನೆನಪು ಮಾಡಿಕೊಂಡು ಅವರನ್ನು ಉತ್ತಮ ರೀತಿ ನೋಡಿಕೊಂಡು ಇಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮನುಷ್ಯ ಮಾನವೀಯತೆ ಮರೆತು ಜೀವನ ಸಾಗುಸುತ್ತಿರುವುದು ದುರದೃಷ್ಟಕರ ಎಂದು ತಿಳಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ವೇಗವಾಗಿ ಮುಂದುವರಿಯುತ್ತಿದ್ದು ನೈತಿಕ ಮೌಲ್ಯಗಳನ್ನು ಕಡೆಗಣಿಸುತ್ತಿದೆ. ಮಾನವನ ಇಂದಿನ ಅಶಾಂತಿ ಯುತ ಬದುಕಿಗೆ ಬಸವಾದಿ ಶಿವ ಶರಣರ ತತ್ವಚರಣೆಯೊಂದೆ ಪರಿಹಾರ ಎಂದು ತಿಳಿಸಿದರು.
ಪ್ರೊ. ಮಲೆಯೂರು ಗುರುಸ್ವಾಮಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬಿತ್ತಿದ ಬಸವಣ್ಣನ ಶರಣ ಧರ್ಮ ಸಿಂಧಾಂತಗಳು ಇಲ್ಲವಾಗಿವೆ. ಇದನ್ನು ಉಳಿಸಲು ನಾವು ಸನಾತನಧರ್ಮ, ಸಂಸ್ಕೃತಿ ಇಂದು ಉಳಿಸಲು ಮುಂದಿನ ಪೀಳಿಗೆಗೆ ಸಂಸಾರದಲ್ಲಿ ಸಂಸ್ಕಾರ ಅಗತ್ಯ ಸಮಾಜದ ಎಲ್ಲ ವರ್ಗಗಳಲ್ಲಿ ಚಾರಿತ್ರ್ಯವಂತ ಸಾತ್ವಿಕ ಸಮುದಾಯ ಬೆಳೆದು ಬರಬೇಕಾಗಿದೆ. ಸಂಸ್ಕಾರ ಅದರ್ಶ ವಿಚಾರ ಬೆಳೆಯುವುದರಿಂದ ಇದು ಸಾಧ್ಯ ಎಂದರು.
ಕರ್ತಾಳು ರಂಭಾಪುರಿ ಶಾಖಾ ಮಠದ ರೇಣುಕಾ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಕೆಸವತ್ತೂರು ಮಠ ಬಸವರಾಜೇಂದ್ರಸ್ವಾಮಿ, ಟಿ.ಮಾಯಿಗೌಡನಹಳ್ಳಿ ಮಠ ಸೋಮಶೇಖರ ಶಿವಾಚಾರ್ಯ ಸ್ವಾಮಿ, ಮುಕುಂದೂರು ಹೊಸಳ್ಳಿ ಮಠ ಚನ್ನಪ್ಪಸ್ವಾಮೀಜಿ, ಸರಗೂರು ಮಠದ ಮೃತ್ಯುಂಜಯಸ್ವಾಮೀಜಿ, ಪ್ರೊ. ಮಹದೇವಪ್ಪ, ಗಂಗಾಬಿಕೆ, ಸೌಮ ಅನಂದ್ ಪಟೇಲ್, ಕು. ದಿವ್ಯ, ಬಿ.ಪಿ.ವೀರಭದ್ರಪ್ಪ, ಮುಂತಾದವರು ಮಾತನಾಡಿದರು.
ಬಸವಪಟ್ಟಣ ಗ್ರಾಪಂಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಮುದಗನೂರು ಚಂದ್ರಪ್ಪ, ಕಾಫಿಪುಡಿ ಶಂಕರಪ್ಪ, ಟಿ.ಸಿ. ಚಂದ್ರಶೇಖರ್, ಬೆಟ್ಟಸೋಗೆ ಶಿವಮೂರ್ತಿ ಇದ್ದರು. ಅಮೃತ ಪಟೇಲ್ ಸ್ವಾಗತಿಸಿದರು. ಇಂದ್ರಜಿತ್ ನಿರೂಪಿಸಿದರು. ಕೆ.ಸಿ. ವಿಜಯಕುಮಾರ್ ವಂದಿಸಿದರು.