ವೀರಶೈವ- ಲಿಂಗಾಯಿತ ಸಮಾಜ ಬೇರೆ ಬೇರೆಯಲ್ಲ: ಶಿವಲಿಂಗ ಶಾಸ್ತ್ರಿ
ರಾಮನಾಥಪುರ: ವೀರಶೈವರು ತಮ್ಮ ಧಾರ್ಮಿಕ ಸಂಸ್ಕಾರದಂತೆ ಇಷ್ಟಲಿಂಗ ಪೂಜೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಸರ್ವ ಕಾಲದಲ್ಲೂ ಲಿಂಗದ ಹಿತ ಬಯಸುವ ಕಾರಣ ಲಿಂಗಾಯಿತರಾಗಿದ್ದು, ವೀರಶೈವ-ಲಿಂಗಾಯಿತ ಸಮಾಜ ಬೇರೆ ಬೇರೆಯಲ್ಲ ಎಂದು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ ರಾಜ್ಯಾಧ್ಯಕ್ಷ ರಂಗಾಪುರದ ಶಿವಲಿಂಗಶಾಸ್ತ್ರಿ ಹೇಳಿದರು. ಕೊಣನೂರು ಹೋಬಳಿ ಮಟ್ಟದ ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅಯ್ಕೆ ಮಾಡಿದ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮ ಸ್ಥಾಪನೆ ಮಾಡಿದರು. 12ನೇ ಶತಮಾನದಲ್ಲಿ ಬಂದ ಬಸವಣ್ಣ ವೀರಶೈವ ಧರ್ಮದಲ್ಲಿನ ಸಮಾನತೆಯ ಆದರ್ಶಗಳನ್ನು ಮೆಚ್ಚಿ ವೀರಶೈವ ಧರ್ಮ ಸ್ವೀಕರಿಸಿದರು. ನಂತರ ತಮ್ಮ ಅನುಭವ ಮಂಟಪದ ವಚನ ಸಾಹಿತ್ಯದ ಮೂಲಕ ರಾಷ್ಟ್ರವ್ಯಾಪ್ತಿಯಲ್ಲಿ ವೀರಶೈವ ಧರ್ಮ ಬೆಳೆಯಲು ಪ್ರೇರಕ ಶಕ್ತಿಯಾದರು ಎಂದರು. ಹೊಳೆನರಸೀಪುರ ತಾಲೂಕು ವಿಶ್ವ ವೀರಶೈವ-ಲಿಂಗಾಯಿತ ವೇದಿಕೆ ಅಧ್ಯಕ್ಷ ಟಿ ಮಾಯಿಗೌಡನಹಳ್ಳಿ ಷಡಕ್ಷರಿ, ಕೆಸವತ್ತೂರು ಸುರೇಶ್, ಕೋಟವಾಳು ಕೆ.ಎಸ್.ಪಂಚ, ಪಂಚಾಕ್ಷರಿ, ಮಲ್ಲಾಪುರ ಎಂ.ಎನ್. ಗುರುಮಲ್ಲೇಶ್, ತಾಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೊಣನೂರು ಪುಟ್ಟಸ್ವಾಮಿ, ನೂತನ ಕೊಣನೂರು ಹೋಬಳಿ ವೇದಿಕೆ ಅಧ್ಯಕ್ಷ ಕೆ.ಪಿ. ಈರಪ್ಪ, ಕಾರ್ಯದರ್ಶಿ ವಿಶ್ವನಾಥ್, ಪದಾಧಿಕಾರಿಗಳು ಇದ್ದರು.