ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಭಾರತೀಯ ಧರ್ಮ, ಸಂಸ್ಕೃತಿಯ ಗಟ್ಟಿತನದಿಂದ ರಾಷ್ಟ್ರ ಉಳಿದಿದೆ'

Vishwanath S
Updated On : 16 Nov 2013, 12:43 pm

ಹಾಸನ: ಭಾರತದ ಮೇಲೆ ಆಕ್ರಮಣಕಾರರು ಎಷ್ಟೇ ದಾಳಿ ಮಾಡಿದರೂ ಧರ್ಮ ಮತ್ತು ಸಂಸ್ಕೃತಿ ಗಟ್ಟಿಯಾಗಿರುವುದರಿಂದ ಇಂದಿಗೂ ರಾಷ್ಟ್ರವಾಗಿ ಉಳಿದಿದೆ ಎಂದು ಪೊನ್ನಮ್‌ಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಯುಕ್ತೇಶಾ ನಂದಜೀ ಮಹಾರಾಜ್ ಹೇಳಿದರು.
ನಗರದ ಎವಿಕೆ ಕಾಲೇಜಿನಲ್ಲಿ  ಸ್ವಾಮಿ ವಿವೇಕಾನಂದ ರಥಯಾತ್ರಾ ಸ್ವಾಗತ ಸಮಿತಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯರು ಭಾರತದ ಇತಿಹಾಸ ತಪ್ಪು ಬರೆದಿದ್ದಾರೆ. ಆರ್ಯರು ಮಧ್ಯ ಏಷ್ಯಾದವರಲ್ಲ. ಅವರು ಭಾರತೀಯರು ಎಂದು ವಿವೇಕಾನಂದರು ಹೇಳಿದ್ದಾರೆ. ನಾವು ಇಂದು ದೇಶದ ಬಗ್ಗೆ ಆತ್ಮಶ್ರದ್ಧೆ, ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ರಾಷ್ಟ್ರ ಅವನತಿಯತ್ತ ಸಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ವಿವೇಕಾನಂದರು ರಕ್ತಪಾತದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ಆಧ್ಯಾತ್ಮ ಮತ್ತು ಶಾಂತಿಯ ಸಂದೇಶದಿಂದ ಜಗತ್ತನ್ನು ಗೆಲ್ಲಲು ಸಾಧ್ಯ ಎಂದು ಹೇಳಿದ್ದಾರೆ. ಅದರಂತೆ ಅವರು ತತ್ವ, ಆದರ್ಶ, ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ರಾಷ್ಟ್ರವನ್ನು ನಿರ್ಮಿಸೋಣ ಎಂದು ಹೇಳಿದರು. ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ ಮಹಾರಾಜ್ ಮಾತನಾಡಿ, ವಿವೇಕಾನಂದರು ಭಾರತದ ಸಂಸ್ಕೃತಿಯ ಜೊತೆ ಪಾಶ್ಚಿಮಾತ್ಯ ರಾಷ್ಟ್ರದ ವಿಜ್ಞಾನ ಅಳವಡಿಸಿಕೊಂಡರೆ ರಾಷ್ಟ್ರ ಮತ್ತಷ್ಟು ಉತ್ಕೃಷ್ಟ ರಾಷ್ಟ್ರವಾಗುತ್ತದೆ ಎಂದು ಹೇಳಿದ್ದಾರೆ. ಆದರೆ ನಾವು ಇಂದು ಪಾಶ್ಚಿಮಾತ್ಯ ರಾಷ್ಟ್ರದ ಜ್ಞಾನ ಅಳವಡಿಸಿ ಕೊಂಡು ಸಂಸ್ಕೃತಿ ಮರೆಯುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿ ಸಂಸ್ಕೃತಿ ಉಳಿಸಿದರೆ ಮಾತ್ರ ಬದುಕಿನಲ್ಲಿ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು. ಪೊನ್ನಮ್‌ಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪಾನಂದಜೀ ಮಹಾರಾಜ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಆತ್ಮಶಕ್ತಿ ಇರುತ್ತದೆ. ಉನ್ನತ ಆದರ್ಶಗಳನ್ನು ಇಟ್ಟುಕೊಂಡು ಗುರಿ ಸಾಧಿಸುವಂತೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement