ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ರೈತ ಸಂಘದಿಂದ ಎಪಿಎಂಸಿ ಮುತ್ತಿಗೆ

Vishwanath S
Updated On : 18 Nov 2013, 12:38 pm

ಕ.ಪ್ರ. ವಾರ್ತೆ, ಬೇಲೂರು, ನ.17
ಎಪಿಎಂಸಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹಾಗೂ ಸೂಕ್ತ ಸವಲತ್ತುಗಳಿಗೆ ಒತ್ತಾಯಿಸಿ ತಾಲೂಕು ರೈತ ಸಂಘ ನ.18 ರಂದು ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬಹು ವರ್ಷದ ಕನಸಾದ ರೈತ ಭವನ ನಿರ್ಮಾಣ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಈ ಬಗ್ಗೆ ರೈತರು ಕೇಳಲು ಹೋದರೆ ಅಧ್ಯಕ್ಷರು ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುವುದಿಲ್ಲ. ಇಡಿ ರಾತ್ರಿ ರೈತರಿಂದ ಕೃಷಿ ಉತ್ಪನ್ನಗಳ ಮಾರಾಟ ನಡೆಯುತ್ತಿದ್ದು, ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ, ವ್ಯಾಪಾಸ್ಥರಿಂದ ಎಲೆಕ್ಟ್ರಾನಿಕ್ ಯಂತ್ರ ಬಳಕೆ ಇಲ್ಲದೆ ರೈತರಿಗೆ ವ್ಯಾಪಾರದಲ್ಲಿ ಮೋಸ ನಡೆಯುತ್ತಿದ್ದರೂ ಎಪಿಎಂಸಿ ಸದಸ್ಯರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆಯುವ ಚುನಾವಣೆಯಲ್ಲಿ ರೈತರು ಮಾತ್ರ ಆಯ್ಕೆಯಾಗಬೇಕು. ಆದರೆ ಹಣ ಇರುವ ಹಾಗೂ ರೀಯಲ್ ಎಸ್ಟೇಟ್ ನಡೆಸುವವರು ಸಮಿತಿಯಲ್ಲಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಎಂದರೇನು ಎಂಬುದರ ಅರ್ಥ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭೋಗಮಲ್ಲೇಶ್ ಮಾತನಾಡಿ, 6 ತಿಂಗಳಾದರೂ  ತಿಂಗಳ ಮಾಸಿಕ ಸಭೆ ಕರೆದು ಚರ್ಚೆ ಮಾಡದ ಆಡಳಿತ ಮಂಡಳಿ ಕಾರ್ಯ ವೈಖರಿ ವಿರುದ್ಧ ರೈತ ಸಂಘ ಪ್ರತಿಭಟನೆಗೆ ಮುಂದಾಗಿದೆ ಎಂದು ತಿಳಿಸಿದರು. ರೈತ ಸಂಘದ ಧರ್ಮೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement