'ಭವಿಷ್ಯದ ದೃಷ್ಟಿಯಿಂದ ಮಕ್ಕಳಲ್ಲಿ ನೈತಿಕತೆ ಹೆಚ್ಚಿಸಬೇಕು'
ಹಾಸನ: ಭವಿಷ್ಯದ ದೃಷ್ಟಿಯಿಂದ ತಂದೆ ತಾಯಿಯರು ಮಕ್ಕಳಲ್ಲಿ ನೈತಿಕತೆ ಹೆಚ್ಚಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ತಿಳಿಸಿದರು.
ನಗರದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹೇಮಾವತಿ ಮಹಿಳಾ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ಭಾಷೆ ಏಕೆ ಉಳಿಯ ಬೇಕು. ಎಂದರೆ ನಾವು ಮಾತೃಭಾಷೆಯಲ್ಲಿ ಆನಂದ ಮತ್ತು ಜ್ಞಾನಕ್ಕೆ ಪ್ರಧಾನವಾಗಿದೆ ಎಂಬುದಕ್ಕೆ ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು. ನಮಗೆ ಅರಿವಿಲ್ಲದೆ ಆಂಗ್ಲ ಭಾಷೆ ಸೇರಿದೆ. ಪ್ರಸ್ತುತದಲ್ಲಿ ಆಂಗ್ಲ ಭಾಷೆ ಎದುರು ಕನ್ನಡ ಮಾತನಾಡಿದರೇ ಅವರ ಘನತೆ ಗೌರವ ಕಡಿಮೆ ಆಗಬಹುದು ಎಂಬ ಮನೋಭಾವ ತಪ್ಪು ಕಲ್ಪನೆ ಎಂದು ಹೇಳಿದರು. ಆಯಾ ಪ್ರದೇಶದ ಭಾಷೆಯಿಂದ ಮಾತ್ರ ರಾಜ್ಯದಲ್ಲಿ ಶಕ್ತಿ ಬೆಳೆಸಲು ಸಾಧ್ಯ ಎಂದರು.