ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾರ್ವಜನಿಕರಿಂದ ಜಿಲ್ಲಾಸ್ಪತ್ರೆ ಕೌಂಟರ್ ಗಾಜು ಪುಡಿ ಪುಡಿ

Vishwanath S
Updated On : 18 Nov 2013, 12:38 pm

ಹಾಸನ: ಜಿಲ್ಲಾಸ್ಪತ್ರೆಯ ಹೊರ ರೋಗಿಗಳಿಗೆ ಚೀಟಿ ವಿತರಣ ಕೇಂದ್ರದಲ್ಲಿ ಭಾನುವಾರ ಯಾರು ಇಲ್ಲದ ಕಾರಣ ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳು ಗಂಟೆ ಗಟ್ಟಲೆ ಕಾದು ನಿಂತು ಬೇಸತ್ತು, ಕೌಂಟರಿನ ಗಾಜನ್ನು ಒಡೆದು ಪುಡಿ ಪುಡಿ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ. ತುರ್ತು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ರೋಗಿಗಳ ಕಡೆಯವರು ಕೌಂಟರ್‌ನಲ್ಲಿ ಗಂಟೆ ಗಟ್ಟಲೆ ಕಾದು ನಿಂತರೂ ಯಾರೂ ಬಾರದ ಕಾರಣ ಕುಪಿತಗೊಂಡು ಗಾಜನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 2 ತಾಸಿಗೂ ಹೆಚ್ಚು ಕಾಲ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಕಾರ್ಡ್ ಪಡೆಯುವುದಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದರೂ ಯಾರೊಬ್ಬರು ಬಂದು ಕಾರ್ಡ್‌ಗಳನ್ನು ವಿತರಸಲಿಲ್ಲ.
 ಇದರಿಂದ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರ್ಡ್ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಿಲ್ಲ. ಜೊತೆಗೆ ಕಾರ್ಡ್ ನೀಡುವವರು ಇಲ್ಲದ ಕಾರಣ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯ ಕೌಂಟರ್‌ನಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ವೈದ್ಯರ ಸಮಸ್ಯೆ ಎದ್ದು ಕಾಣುತ್ತಿದೆ. ಕೌಂಟರ್ ಗಾಜನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ಕುಮಾರ್ ಹಾಗೂ ಅರುಣ್ ಎಂಬವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement