ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಂಇಎಸ್ ಅಟ್ಟಹಾಸ ಕೊನೆಗೊಳಿಸಿ

Rashmi Kasaragodu
Updated On : 27 Nov 2013, 1:25 am

ಕ.ಪ್ರ.ವಾರ್ತೆ    ಹಾಸನ    ನ.26
ಎಂಇಎಸ್ ಶಾಸಕರು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನೀಡಿದ ಕನ್ನಡ ವಿರೋಧಿ ಹೇಳಿಕೆ ಖಂಡಿಸಿ ಹಾಗೂ ಕನ್ನಡಪರ ಹೋರಾಟಗಾರರ ವಿರುದ್ಧ ದುರುದ್ದೇಶಪೂರ್ವಕವಾಗಿ ದಾಖಲು ಮಾಡಿರುವ ಪ್ರಕರಣಗಳನ್ನು ಹಿಂಪಡೆದು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿದ ಪ್ರತಿಭಟನಾಕಾರರು, ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಕನ್ನಡ ವಿರೋಧಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಚಳಿಗಾಲದ ಅಧಿವೇಶನದ ಪ್ರಥಮ ದಿನವಾದ ಸೋಮವಾರ ಕಾರ್ಯಕಲಾಪದಲ್ಲಿ ಎಂಇಎಸ್ ಶಾಸಕರಾದ ಸಂಭಾಜೀ ಪಾಟೀಲ್ ಹಾಗೂ ಅರವಿಂದ ಪಾಟೀಲ್ ಹಿಂದಿಯಲ್ಲಿ ಕಲಾಪದ ಚರ್ಚೆ ಆರಂಭಿಸಿ, ಕನ್ನಡನಾಡಿಗೆ ಅಪಮಾನ ಮಾಡಿದ್ದಾರೆ.
ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳೆಗಾವಿ ಜಿಲ್ಲೆಯ ಶಾಸಕರಾಗಿರುವ ಇವರು ವಿಧಾನಸಭೆಯಲ್ಲೂ ಮರಾಠಿ ಭಾಷೆಯಲ್ಲಿಯೇ ಸುತ್ತೋಲೆ ಹೊರಡಿಸುವಂತೆ ಕಿರಿಕಿರಿ ಉಂಟು ಮಾಡಿದ್ದು, ಇದು ಹೇಯಕೃತ್ಯ ಹಾಗೂ ಮೂರ್ಖತನದ ಪರಮಾವಧಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳವಾಗಿ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ನವರು ಸೀಮಾ ಮಹಾಮೇಳಾವ ಆಯೋಜಿಸಿದ್ದರು. ಮಹಾಮೇಳದಲ್ಲಿ ಶಾಸಕ ಸಂಭಾಜಿ ಪಾಟೀಲರು ತಮ್ಮ ಭಾಷಣದಲ್ಲಿ ಮರಾಠಿ ಭಾಷಿಕರನ್ನು ಪ್ರಚೋದಿಸಿದಲ್ಲದೆ, ಕರ್ನಾಟಕ ಸರ್ಕಾರದ ವಿರುದ್ಧ ಕೀಳುಮಟ್ಟದ ಶಬ್ಧ ಪ್ರಯೋಗಸಿದ್ದಾರೆ ಎಂದು ಆರೋಪಿಸಿದರು.                                                                    ಯಾವುದೇ ನೈತಿಕ ಹಕ್ಕಿಲ್ಲ: ರಾಜ್ಯದ ಶಾಸಕರಾಗಿರುವ ಇವರಿಗೆ ಕನ್ನಡ ನಾಡಿನಲ್ಲಿ ಶಾಸಕರಾಗಿ ಇರುವುದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಈಗಾಗಲೇ ಹಲವು ಬಾರಿ ಕರ್ನಾಟಕ ಸರ್ಕಾರದ ವಿರುದ್ಧ ಕನ್ನಡ ನಾಡಿನ ಜನತೆಯ ವಿರುದ್ಧ ಪುಂಡಾಟಿಕೆ ಮೆರೆದಿರುವ ಸಂಭಾಜಿ ಪಾಟೀಲ ಮಿತಿ ಮೀರಿದ್ದಾರೆ. ವಿಧಾನಸಭೆಯ ಕಲಾಪಕ್ಕೆ ಕಿರಿಕಿರಿ ಉಂಟು ಮಾಡಿದ್ದಾರೆ. ಮರಾಠಿಯಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಿರೋಧಿಗಳಂತೆ ವರ್ತಿಸಿದ್ದಾರೆ ಎಂದು ದೂರಿದರು.
ಶಾಸಕತ್ವ ರದ್ದು ಪಡಿಸಿ: ಕೇಸರಿ ಬಣ್ಣದ ಪೇಟ ಧರಿಸಿ ಬಂದಿದ್ದ ಅವರು ಮೊದಲು ಮರಾಠಿಯಲ್ಲಿ ಮಾತನಾಡಿದನು. ಇದನ್ನು ಕೆಲವು ವಿರೋಧಿಸಿದ್ದರಿಂದ ಹಿಂದಿಗೆ ಬದಲಾಯಿಸಿದ್ದಾರೆ. ಆ ಮೂಲಕ ತಮಗೆ ರಾಷ್ಟ್ರೀಯ ಭಾಷೆ ಹಿಂದಿಯನ್ನು ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಕಲ್ಪಿಸಲಾಗಿದೆ ಎಂದು, ಕನ್ನಡ ಭಾಷೆಯನ್ನು ಹಾಗೂ ಕನ್ನಡಿಗರನ್ನು ಅಗೌರವಿಸಿದ್ದಾರೆ. ಜತೆಗೆ ಕರ್ನಾಟಕ ಸರ್ಕಾರದ ವಿರುದ್ಧ ನಿಂದಿಸಿದ್ದಾರೆ ಎಂದು ಕಿಡಿಕಾರಿದರು.
ಸಂಘದ ಗೌರವಾಧ್ಯಕ್ಷ ಬಿ.ಜೆ.ಬಾಳ್ಳುಗೋಪಾಲ್, ಜಿಲ್ಲಾಧ್ಯಕ್ಷ
ಪ್ರಶಾಂತ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್ ಶರ್ಮ, ಕುಮಾರ್, ರಾಜು, ಸಂತೋಷ್, ಮೋಹನ್ ಕುಮಾರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.


ಉಗ್ರ ಹೋರಾಟದ ಎಚ್ಚರಿಕೆ
ಹಲವು ಬಾರಿ ಕರ್ನಾಟಕ ಸರ್ಕಾರದ ವಿರುದ್ಧ ಕನ್ನಡನಾಡಿನ ಜನತೆಯ ವಿರುದ್ಧ ಪುಂಡಾಟಿಕೆ ಮೆರೆದಿರುವ ಈ ಶಾಸಕರ ವಿರುದ್ಧ ಕ್ರಿಮಿನಲಲ್ಮೊಕದ್ದಮೆ ದಾಲಿಸಿ ಕೂಡಲೇ ಬಂಧಿಸಬೇಕು ಹಾಗೂ ಕನ್ನಡ ಹೋರಾಟಗಾರರನ್ನು ಬಂಧಿಸಿರುವವರನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಆಗ್ರಹಿಸಿದರು.  ಈ ಇಬ್ಬರು ಶಾಕರು ಕನ್ನಡಿಗರ ಮೇಲೆ ಇದೇ ರೀತಿ ತಮ್ಮ ಅಟ್ಟಹಾಸವನ್ನು ಮೆರೆದರೆ ಆ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.


ವಿಧಾನ ಮಂಡಲದಿಂದ ಹೊರಗಿಡಿ
ಕನ್ನಡ ವಿರೋಧಿ ಶಾಸಕರಾದ ಸಂಭಾಜೀ ಪಾಟೀಲ್ ಹಾಗೂ ಅರವಿಂದ ಪಾಟೀಲರನ್ನು ವಿಧಾನಮಂಡಳದಿಂದ ಹೊರಗೆ ಇಡಬೇಕು. ಅವರನ್ನು ಯಾವುದೇ ಕಾರಣಕ್ಕೆ ಸಭೆಗೆ ಬರಲು ಅವಕಾಶ ನೀಡಬಾರದು. ಅವರು ಸಭೆಯ ನೀತಿ ಉಲ್ಲಂಘನೆ ಮಾಡಿರುವುದು ಖಂಡನಿಯ ಎಂದರು.ಕನ್ನಡ ವಿರೋಧಿಗಳಾಗಿರುವ ಇವರು ಯಾವುದೇ ಕಾರಣಕ್ಕೂ ಕನ್ನಡ ನಾಡಿನಲ್ಲಿ ಶಾಸಕರಾಗಿ ಮುಂದುವರೆಯಬಾರದು. ಜೊತೆಗೆ ನೈತಿಕತೆ ಕೂಡ ಇವರಿಗೆ ಇಲ್ಲ. ಕನ್ನಡನಾಡಿನಲ್ಲಿ ನಿಂತು ಶಾಸಕರಾಗಿ ಇಗ ಕನ್ನಡವಿರೋಧಿ ಚಟುವಟಿಕೆಯಲ್ಲಿ ತೊಡಗಿರುವಂತಹ ಶಾಸಕರು ರಾಜ್ಯದ ಜನತೆಗೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಬಾರಿ ಕನ್ನಡಿಗರಿಗೆ ತೊಂದರೆ ನೀಡುವ ಮೂಲಕ ತಮ್ಮ ಅಟ್ಟಹಾಸ ಮೆರೆದಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement