ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಟಿಎಂ ಭದ್ರತೆಗೆ ಬ್ಯಾಂಕ್ ಹೊಣೆ: ಪೊಲೀಸರ ತಾಕೀತು

Rashmi Kasaragodu
Updated On : 27 Nov 2013, 1:26 am

ಅರಸೀಕೆರೆ: ಹಾಡ ಹಗಲೇ ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ  ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಪಾತಕಿಯನ್ನು ಬಂಧಿಸಿ ಶಿಕ್ಷೆ ನೀಡಬೇಕೆಂಬ ಒತ್ತಡ ಪೊಲೀಸ್  ಇಲಾಖೆ ಮೇಲಿದ್ದು, ಘಟನೆಯಿಂದ ಎಚ್ಚೆತ್ತಿರುವ ಪಟ್ಟಣ ಠಾಣೆ  ಪೊಲೀಸರು ಪಟ್ಟಣದ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರ ಸಭೆ  ನಡೆಸಿ ಸಲಹೆ ನೀಡಿದರು.
ಪಟ್ಟಣದಲ್ಲಿ ಖಾಸಗಿ ಬ್ಯಾಂಕ್ಗಳು ಸೇರಿದಂತೆ 20 ಬ್ಯಾಂಕ್ಗಳು, 17 ಎಟಿಎಂ ಕೇಂದ್ರಗಳು ಸೇವೆಯಲ್ಲಿದ್ದು, ಈ ನಿಟ್ಟಿನಲ್ಲಿ ಬ್ಯಾಂಕ್ಗಳು ಗ್ರಾಹಕರ ಭದ್ರತೆಗೆ ಏನು ಕ್ರಮ ಕೈಗೊಂಡಿವೆ. ಹಾಗು ಕ್ರಮ ಕೈಗೊಳ್ಳಬೇಕೆಂಬುದನ್ನು ಪೊಲೀಸರು ಹಾಗು ಬ್ಯಾಂಕ್  ವ್ಯವಸ್ಥಾಪಕರು ಚರ್ಚಿಸಿದರು. ಪಟ್ಟಣ ಠಾಣೆ ವೃತ್ತ ನಿರೀಕ್ಷಕ ನಂದಕುಮಾರ್ ಮಾತನಾಡಿ, ಬ್ಯಾಂಕ್ ಹಾಗು ಎಟಿಎಂನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರಿಗೆ ಬ್ಯಾಂಕ್ಗಳು ಸೂಕ್ತ ಭದ್ರತೆ ಒದಗಿಸಬೇಕು. ಎಟಿಎಂ  ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿಯನ್ನು  ಕಡ್ಡಾಯವಾಗಿ ನೇಮಿಸಬೇಕು ಎಂದು ತಾಕೀತು ಮಾಡಿದರು.
ಇತ್ತೀಚೆಗೆ ರಾಜ್ಯದ ವಿವಿಧೆಡೆಯಲ್ಲಿ ಬ್ಯಾಂಕ್, ಮನೆ, ಕಚೇರಿಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಾರ್ವಜನಿಕರ ಸಹಕಾರ  ಅತ್ಯಗತ್ಯವಾಗಿದೆ ಎಂದರು. ಉಪ ನಿರೀಕ್ಷಕ ಐ.ಎನ್.ಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement