ಕೊಲೆ ಆರೋಪ: ಐವರ ಬಂಧನ
ಸಕಲೇಶಪುರ: 6 ದಿನಗಳ ಹಿಂದೆ ನಡೆದ ಕೊಲೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಕಲೇಶಪುರ ಪೋಲಿಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹಲಸುಲಿಗೆ ಗ್ರಾಮದ ಪುಟ್ಟಸ್ವಾಮಿಗೌಡರ ಪುತ್ರ ಗಿರೀಶ್(38) ಎಂಬಾತನನ್ನು ಕಳೆದವಾರ ದುಷ್ಕರ್ಮಿಗಳು ಮನೆ ಸಮೀಪದಲ್ಲಿಯೇ ಕೊಚ್ಚಿ ಕೊಲೆ ಮಾಡಿ ಸಮೀಪದ ತೋಟವೊಂದರಲ್ಲಿ ಹೆಣ ಬಿಸಾಕಿ ಪರಾರಿಯಾಗಿದ್ದರು. ಈ ಸಂಬಂಧ ಪಟ್ಟಣ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಿಟ್ಟಿನಲ್ಲಿ ಕೊಲೆ ಆರೋಪದಡಿ ಬಂಧಿತರಾಗಿರುವ ರಘು (30), ಲಿಂಗರಾಜು ಅಲಿಯಾಸ್ ರಾಜು (36), ಚಂದ್ರೇಗೌಡ (45), ಸತೀಶ್ (31), ಅಪ್ಪು ಆಲಿಯಾಸ್ ಗಂಗರಾಜ್ (38) ಎಲ್ಲರೂ ಹಲಸುಲಿಗೆ ಸುತ್ತಮುತ್ತದ ಗ್ರಾಮದವ ರಾಗಿದ್ದು ಜಮೀನಿನ ತಕರಾರಿನ ವೈಷಮ್ಯವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಪೋಲಿಸರು ಇಬ್ಬರು ಆರೋಪಿಗಳನ್ನು ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ, ಇನ್ನುಳಿದ ಮೂವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಬಂಧಿಸ ಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಗಳನ್ನು ಪಟ್ಟಣದ ಕೌಡಹಳ್ಳಿ ಉಪ ಬಂಧಿಖಾನೆಯಲ್ಲಿ ಇರಿಸಲಾಗಿದೆ.