ಮೂಡಿಗೆರೆಯಲ್ಲಿ ಡಿ.7, 8 ರಂದು ಕೃಷಿ ಮೇಳ
ಹಾಸನ: ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಮೂಡಿಗೆರೆಯಲ್ಲಿ ಡಿ.7 ಮತ್ತು 8 ರಂದು ಕೃಷಿ ಮೇಳ ಏರ್ಪಡಿಸಲಾಗಿದೆ.
ಮೇಳದಲ್ಲಿ ಅಭಿವೃದ್ಧಿಪಡಿಸಿದ ತಳಿಗಳು ಹಾಗೂ ನೂತನ ಬೇಸಾಯ ತಾಂತ್ರಿಕತೆ, ಸಮಗ್ರ ಪೀಡೆ ನಿರ್ವಹಣೆ, ತೋಟಗಾರಿಕಾ ಬೆಳೆಗಳಾದ ಸಪೋಟಾ, ರಬ್ಬರ್, ಕಾಫಿ ಬೆಳೆಗಳ ಬಗ್ಗೆ ಮಾಹಿತಿ, ಕ್ಷೇತ್ರ ಭೇಟಿ ವೀಕ್ಷಣೆ ಏರ್ಪಡಿಸಲಾಗಿದೆ. ವಿಜ್ಞಾನಿಗಳು ಪ್ರಗತಿಪರ ರೈತರೊಂದಿಗೆ ಕೃಷಿ ಸಂಬಂಧಿ ಸಮಸ್ಯೆಗಳ ಕುರಿತು ಚರ್ಚಿಸಬಹುದು, ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಬಹುದಾಗಿದೆ. ಕೃಷಿ ಮೇಳದ ಪ್ರಯೋಜನ ಪಡೆಯಲು ಮಡಿಕೇರಿ, ಹಾಸನ ಜಿಲ್ಲೆಗಳ ತಾಲೂಕುಗಳಿಗೆ ಸೇರಿದ ರೈತ, ರೈತ ಮಹಿಳೆಯರು ಭಾಗವಹಿಸಬಹುದು.