'ವಿದ್ಯಾರ್ಥಿ ದಿಸೆಯಲ್ಲೆ ಶಿಸ್ತು-ಗೌರವ ಬೆಳೆಯಲಿ'
ಹೊಳೆನರಸೀಪುರ: ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಜತೆಗೆ ಪರಿಸರ ಪ್ರೀತಿ, ಪ್ರಾಣಿ-ಪಕ್ಷಿ ಪ್ರೀತಿ, ತಂದೆ-ತಾಯಿ, ಗುರು-ಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಬಾಲಕಿಯರ ಪದವಿಪೂರ್ವ ಕಾಲೇಜು
ಕನ್ನಡ ಉಪನ್ಯಾಸಕ ಶಿವಯೋಗಿ ಕಿವಿಮಾತು ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆ ಚುಟುಕುಗಳಾಗಿ ಕವನಗಳಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್ ಮಾತನಾಡಿ, ಓದುವ ಅಭಿರುಚಿಗಳನ್ನು ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ಬೆಳಸಬೇಕಾದ ಅವಶ್ಯಕತೆ ಇದೆ ಇದರಿಂದಲಾದರೂ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಎಸ್.ಆರ್.ಲೋಕೇಶ್ ಮಾತನಾಡಿ, ಚುಟುಕು ಕವಿ ಸರ್ವಜ್ಞ ದಿನಕರದೇಸಾಯಿ ಚುಟುಕುಗಳು ಇಂದಿಗೂ ಪ್ರಸ್ತುತ
ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಚುಟುಕು ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಲಕ್ಷ್ಮಿನಾಗರಾಜು, ಕುಸುಮಾಗುಣಶೇಖರ್, ದಿಲೀಲ್ಕುಮಾರ್ ಜೈನ್, ರಂಗಸ್ವಾಮಿ ಮತ್ತಿತರರು ಇದ್ದರು.