ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಮಸ್ಯೆ ಬಗ್ಗೆ ಮಾಜಿ ಪ್ರಧಾನಿ ಕುಟುಂಬ ಉತ್ತರಿಸಲಿ'

Rashmi Kasaragodu
Updated On : 27 Nov 2013, 1:27 am

ಕ.ಪ್ರ.ವಾರ್ತೆ    ಹಾಸನ    ನ.26  
ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಚಾರ್ಜ್ ಸೀಟ್ನಂತೆ ಸಿದ್ದಪಡಿಸಿದ್ದು ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅವರ ಪುತ್ರರು ಉತ್ತರಿಸಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸೂಕ್ತವಾಗಿ ಸ್ಪಂದಿಸದ ಜೆಡಿಎಸ್ ನಾಯಕರ ವಿರುದ್ಧ ಮಾತನಾಡಿರೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ.
 ಜೆಡಿಎಸ್ ನಾಯಕರು ಪ್ರತಿಕ್ರಿಯೆ ನೀಡದ ಕಾರಣ ನಾವು ಮಾಡಿರುವ ಆರೋಪಗಳು ಸತ್ಯ ಎಂಬ ಅಂಶ ಅರಿವಾಗಿದ್ದು,  ಜೆಡಿಎಸ್ ಮುಖಂಡರ ಮೌನವೇ ಒಪ್ಪಿಕೊಂಡಂತಿದೆ ಎಂದು ಆರೋಪಿಸಿದರು.
ಬೇಲೂರು-ಅರಸೀಕೆರೆಗೆ ನೀರಾವರಿ ಯೋಜನೆಯ ವಿಫಲ, ಏತ ನೀರಾವರಿ ಯೋಜನೆಗಳು, ಜಿಲ್ಲೆಯ ರಸ್ತೆಗಳು, ಕಾಡಾನೆ ಸಮಸ್ಯೆ, ಏಲಕ್ಕಿ, ಮೆಣಸು, ಕಾಫಿ ಬೆಳೆ ನಾಶದ ಸಮಸ್ಯೆಗಳು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದರೂ ಮಾಜಿ ಪ್ರಧಾನಿಯವರು ಈ ಬಗ್ಗೆ ಮಾತನಾಡಿದೆ, ಅಕ್ರಮವಾಗಿ ಮರಳು ಸಾಗಿಸುತ್ತಿರುವಂತಹವರ ಪರವಾಗಿ ಮಾತನಾಡುತ್ತಿದ್ದಾರೆ ಆರೋಪ ಮಾಡಿದ್ದಾರೆ.  
ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಿ: ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ  ಸಭೆಯಲ್ಲಿ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಅವರು ತನ್ನ ಸಹದ್ಯೋಗಿ ಶಾಸಕರೊಂದಿಗೆ ಸೇರಿಕೊಂಡು ತಹಸೀಲ್ದಾರ್ ಜೀಪ್ಗೆ ಬೆಂಕಿ ಹಚ್ಚುವಂತೆ ಹೇಳುವ ಮೂಲಕ ಪ್ರಚೋದನೆ ನೀಡಿದ್ದಾರೆ. ಮಾಜಿ ಪ್ರಧಾನಿ ಹಾಗೂ ಜಿಲ್ಲಾಧಿಕಾರಿಗಳು ಸಮ್ಮುಖದಲ್ಲಿ ಈ ಮಾತುಗಳನ್ನು ಹೇಳಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಈ ವಿರುದ್ಧ ಜಿಲ್ಲಾಧಿಕಾರಿಗಳು ರಾಜ್ಯಪಾಲರು, ಮುಖ್ಯಮಂತ್ರಿ, ಸ್ವೀಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಎಚ್.ಕೆ.ಜವರೇಗೌಡ ಮಾತನಾಡಿದರು. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಮೋಹನ್,ಮಹೇಶ್, ಮುನಿಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement