'ಸಾಹಿತ್ಯದಿಂದ ಜ್ಞಾನ ವೃದ್ಧಿ'
ಸಕಲೇಶಪುರ: ಸಮಾಜದಲ್ಲಿನ ಕ್ರೌರ್ಯವನ್ನು ಸಾಹಿತ್ಯದ ಮೂಲಕ ತಡೆಯ ಬಹುದಾಗಿದೆ ಎಂದು ಸಾಹಿತಿ ಡಾ.ಜಾನಕಿ ಸುಂದರೇಶ್ ಹೇಳಿದರು. ಪುರಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸರಸ್ವತಿ ಬಾಯಿ ರಾಜವಾಡೆ ಜನ್ಮಶತಾಬ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಾನವೀಯತೆ ಎಂಬುದು ಮರೆಯಾಗಿದ್ದು ಹಣದ ಮುಂದೆ ಸಂಬಂಧಗಳು ಅಳಿಸಿಹೋಗುತ್ತಿವೆ ಎಂದು ವಿಷಾದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಜನಾರ್ದನ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹೆಚ್ಚು ಸಕ್ರಿಯವಾದಷ್ಟು ಸಾಹಿತ್ಯಾಭಿಮಾನಿಗಳ ಸಂಖ್ಯೆ ಸಹ ಹೆಚ್ಚಾಗಲಿದೆ. ಆದ್ದರಿಂದ, ಕನ್ನಡದ ಪರವಾಗಿ ಕೆಲಸ ಮಾಡುವ ಎಲ್ಲಾ ಸಂಘಟನೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚು ಸಕ್ರೀಯವಾಗ ಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸರಸ್ವತಿಬಾಯಿ ರಾಜವಾಡೆ ಅವರ ಅತ್ಮಕಥೆ ಆಧಾರಿತ ಕೃಷ್ಣಮೂರ್ತಿ ನಿರ್ದೇಶನದ ಗಿರಿಬಾಲೆ ನಾಟಕ ಪ್ರದರ್ಶಿಸಲಾಯಿತು.