ಅಧಿಕಾರಿಗಳಿಂದ ದಾಳಿ; 80 ಸಾವಿರ ಮೌಲ್ಯದ ಮದ್ಯ ನಾಶ
ಹಾಸನ: ನಾನಾ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 80 ಸಾವಿರ ಮೌಲ್ಯದ ಅಕ್ರಮ ಮದ್ಯವನ್ನು ಬುಧವಾರ ಬೆಳಗ್ಗೆ ಚರಂಡಿಗೆ ಚೆಲ್ಲುವುದರ ಮೂಲಕ ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿದರು. ನಗರದ ಎಂ.ಜಿ. ರಸ್ತೆ, ರವೀಂದ್ರ ನಗರದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಅಬಕಾರಿ ಉಪ ಆಯುಕ್ತ ಬಿ.ವಿ. ಹುವಪ್ಪಗೌಡ ಆದೇಶದಂತೆ ಒಟ್ಟು 38 ಅಬಕಾರಿ ಮೊಕದ್ದಮೆಗಳಲ್ಲಿ ವಶಪಡಿಸಿಕೊಳ್ಳಲಾದ 359.680 ಲೀಟರ್ ಮದ್ಯ ಹಾಗೂ 36.210 ಲೀಟರ್ ಬೀಯರನ್ನು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಆಲೂರು ತಹಸೀಲ್ದಾರ್ ಶಾರದಮ್ಮ, ಅಬಕಾರಿ ಉಪ ಅಧೀಕ್ಷಕ ಎಂ.ಬಿ. ಸುನೀಲ್, ಕೆಎಸ್‌ಬಿಸಿಎಲ್ ವ್ಯವಸ್ಥಾಪಕ ಜಗದೀಶ್, ಅಬಕಾರಿ ನಿರೀಕ್ಷಕರಾದ ಕೆ.ಜೆ. ಸಂತೋಷ್, ಎಂ.ಕೆ. ಕೇಶವ ಮೂರ್ತಿ, ಕುಮಾರಸ್ವಾಮಿ, ಎಂ.ಜಿ. ಅನಿತ ಇದ್ದರು.