ಇಂದು ಧೂಮಕೇತು ವೀಕ್ಷಣಾ ಕಾರ್ಯಕ್ರಮ
ಹಾಸನ: ಭಾರತ ಜ್ಞಾನ- ವಿಜ್ಞಾನ ಜಿಲ್ಲಾ ಸಮಿತಿ, ಜಿಲ್ಲಾ ವಿಜ್ಞಾನ ಕೇಂದ್ರ, ವಿಜಯ ಶಾಲೆಯ ಆಶ್ರಯದಲ್ಲಿ ನ.27ರಂದು ಬೆಳಗ್ಗೆ 5ರಿಂದ 6ರವರೆಗೆ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಾಸನ ನಗರದ ಜಿಲ್ಲಾ ಕ್ರೀಡಾಂಗಣದ ಹೊರ ಆವರಣದಲ್ಲಿವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಅಪರೂಪಕ್ಕೊಮ್ಮೆ ದರ್ಶನ ನೀಡುವ ಕಾಯಗಳು ಧೂಮಕೇತುಗಳು, ಭೂಮಿಯಲ್ಲಿ ಮಾನವನ ಇತಿಹಾಸದಲ್ಲಿ ಮೊದಲ ಬಾರಿಗೆ ಇಸಾನ್ ಧೂಮಕೇತು ಕಾಣಿಸುತ್ತಿದ್ದು, ಅದು ನಮಗೆ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮೊದಲು ಗೋಚರಿಸಲಾರಂಭಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಅಹಮದ್ ತಿಳಿಸಿದ್ದಾರೆ.