ಪಶು ಆಹಾರ ಘಟಕದಿಂದಲೂ ಖರೀದಿ
ಹಾಸನ: ರೈತರಿಂದ ನೇರವಾಗಿ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಲ್ಗೆ 1310 ರು. ಗಳಿಗೆ ಇಲ್ಲಿನ ರಾಜ್ಯ ಹಾಲು ಮಹಾ ಮಂಡಲ ಪಶು ಆಹಾರ ಘಟಕ ನ.29ರಿಂದ ಖರೀದಿಸಲಿದೆ. ಶೇ.14ಕ್ಕಿಂತ ಕಡಿಮೆ ತೇವಾಂಶವಿರುವ ಇರುವ ಮೆಕ್ಕೆಜೋಳವನ್ನು ಖರೀದಿಸಿ, ಇದಕ್ಕೆ ತಗಲುವ ಎಪಿಎಂಸಿ ಸೆಸ್ ಅನ್ನು ಘಟಕವೇ ಪಾವತಿಸುತ್ತದೆ. ಅಲ್ಲದೆ ಪ್ರತಿ ಗೋಣಿ ಚೀಲಕ್ಕೆ 10 ಸೇರಿಸಿ ಒಟ್ಟು ಖರೀದಿ ಮೊತ್ತವನ್ನು ಒಂದೇ ಕಂಚಿನಲ್ಲಿ ಪಾವತಿಸಲಾಗುತ್ತದೆ. ವಿವರಕ್ಕೆ ದೂ. 08172- 243080, 243171 ಸಂಪರ್ಕಿಸಬೇಕೆಂದು ಘಟಕದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ವಿವೇಕ್ ತಿಳಿಸಿದ್ದಾರೆ.