ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಸ ಮಾರುಕಟ್ಟೆ ನೀತಿ ಜಾರಿ ಯತ್ನಕ್ಕೆ ತೀವ್ರ ವಿರೋಧ

Mainashree
Updated On : 27 Nov 2013, 8:39 am

ಹಾಸನ: ರಾಜ್ಯ ಸರ್ಕಾರ ಜಾರಿಗೆ ತರಲು ಯತ್ನಿಸುತ್ತಿರುವ ಮಾರುಕಟ್ಟೆ ನೀತಿ- 2013 ರೈತರು ಹಾಗೂ ಕೃಷಿಕರಿಗೆ ವಿರೋಧಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಬಹುರಾಷ್ಟ್ರೀಯ ಬಂಡವಾಳದಾರರ ಲೂಟಿಗೆ ಅವಕಾಶ ನೀಡುವ, ಖಾಸಗಿ ಮಾರುಕಟ್ಟೆಗಳಿಗೆ ಅವಕಾಶ ಮತ್ತು ಒಪ್ಪಂದ ಕೃಷಿ, ಗುತ್ತಿಗೆ ಕೃಷಿ ಮತ್ತು ಕಂಪನಿ ಕೃಷಿಗೆ ಅವಕಾಶ ನೀಡುವ, ಅದೇ ರೀತಿ ರಾಜ್ಯದ ರೈತರು ಹಾಗೂ ಕೂಲಿಕಾರರು ಮತ್ತು ಎಪಿಎಂಸಿ ವರ್ತಕರು, ಕಾರ್ಮಿಕರು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಸರ್ವನಾಶ ಮಾಡಲಿರುವ ಅದೇ ಹಳಸಲು ನೀತಿಗಳನ್ನು ಮಾರುಕಟ್ಟೆ ನೀತಿ- 2013 ಎಂಬ ಹೊಸ ಹೆಸರಿನಲ್ಲಿ ಜಾರಿಗೆ ತರಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ದುಷ್ಕೃತ್ಯ ಮತ್ತು ವಂಚನೆಯನ್ನು ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ಕುಮಾರ್ ಖಂಡಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಈ ಜನ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಕಾಯ್ದೆಗಾಗಿ ಅಂಗೀಕರಿಸದಂತೆ ಮತ್ತು ಈ ನೀತಿಯನ್ನು ಜಾರಿಗೆ ತರದಂತೆ ಒತ್ತಾಯಿಸಲು ರಾಜ್ಯಾದ್ಯಂತ ಮಾರುಕಟ್ಟೆ ನೀತಿ- 2013ರ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement