ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾತೃ ಭಾಷೆಯಲ್ಲೇ ಮೂಲ ಕಲ್ಪನೆಯ ಅರ್ಥ: ರಮೇಶ್

Mainashree
Updated On : 28 Nov 2013, 9:04 am

ಕ.ಪ್ರ.ವಾರ್ತೆ  ಹಾಸನ  ನ.28
ನಾಡು-ನುಡಿ ಬೆಳವಣಿಗೆ ಈ ನಾಡಿನ ಜನರ ಮನಸ್ಥಿತಿಯ ಮೇಲೆ ಅವಲಂಬಿಸಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್. ರಮೇಶ್ ಅಭಿಪ್ರಾಯಪಟ್ಟರು. ತಾಲೂಕಿನ ಬಸವಾಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ಯಭಾಷೆ ಕಲಿಕೆ ತಪ್ಪಲ್ಲ. ಆದರೆ ಮಾತೃಭಾಷೆ ಅನ್ಯಭಾಷೆ ಕಲಿಕೆಗೆ ಮಾಧ್ಯಮವಾಗಬೇಕು. ಮೂಲ ಪರಿಕಲ್ಪನೆ ಅರ್ಥವಾಗುವುದು ಮಾತೃ ಭಾಷೆಯಲ್ಲಿ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಮತೇಶ್ ಕನ್ನಡಾಂಬೆಯ ಚಿತ್ರವನ್ನು ಅನಾವರಣಗೊಳಿಸಿದರು. ಹಳೇಬೀಡಿನ ಯುವ ಕಲಾವಿದ ಶಾಂತರಾಜು ಅವರು ಕನ್ನಡಾಂಬೆಯ ಚಿತ್ರವನ್ನು ಬಿಡಿಸಿದರು. ಮುಖ್ಯ ಶಿಕ್ಷಕ ಸಿ.ಕೆ. ಹರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃ ಭಾಷೆಯನ್ನು ಚೆನ್ನಾಗಿ ಕಲಿತವರು ಇಂದು ಉತ್ತುಂಗ ಶಿಖರಕ್ಕೇರಿದ್ದಾರೆ ಎಂದು ಹೇಳಿ ಸಿಎನ್‌ಆರ್ ರಾವ್, ಕಲಾಂ ಅವರನ್ನು ಉದಾಹರಿಸಿದರಲ್ಲದೆ, ಮಾತೃ ಭಾಷೆಯಲ್ಲಿ ಕಲಿತವರು. ನಮ್ಮ ನಾಡು, ನುಡಿ, ಸಂಸ್ಕೃತಿ ಬಗ್ಗೆ ಪ್ರೀತಿಯನ್ನು ಬಾಲ್ಯದಲ್ಲಿ ಬೆಳೆಸಿಕೊಳ್ಳಬೇಕು ಎಂದರು. ಗೀತ ಗಾಯನ ಕಾರ್ಯಕ್ರಮವನ್ನು ಗಾಯಕ ಕೆ. ಶಿವಕುಮಾರಾಚಾರಿ ಮತ್ತು ಕೆ. ದಿನಕರ್ ನಡೆಸಿಕೊಟ್ಟರು. ಹನುಮಂತೇಗೌಡ, ಶಿಕ್ಷಕರಾದ ರಮೇಶ್, ಕೃಷ್ಣ.ಕೆ, ಕೇಶವಮೂರ್ತಿ ಇದ್ದರು. ಕವಿತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement