ಆಕಸ್ಮಿಕ ಬೆಂಕಿ; ಮನೆ ಭಸ್ಮ
ಅರಕಲಗೂಡು: ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಹುಲಿಕಲ್ಲು ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ 1.30ರ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ಸಂಭವಿಸಿದೆ. ಮನೆಯಲ್ಲಿ 50 ಗ್ರಾಂ. ಚಿನ್ನವೂ ಸೇರಿದಂತೆ ದಿನಸಿ ಪದಾರ್ಥಗಳು ಇದ್ದವು. ಎಲ್ಲವೂ ಅಗ್ನಿಗೆ ಆಹುತಿಯಾಗಿದೆ. ಸುಮಾರು 3-4 ಲಕ್ಷ ರು. ನಷ್ಟ ಸಂಭವಿಸಿರಬಹುದೆಂದು ಹೇಳಲಾಗಿದೆ. ಘಟನೆ ಸ್ಥಳಕ್ಕೆ ಅಗ್ನಿಶಾಮಕ ದಳ ಅರಕಲಗೂಡಿನಿಂದ ಬಂದು ಬೆಂಕಿ ನಂದಿಸಿ, ಇತರೆ ಮನೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದೆ.
ಡಿಪ್ಲೊಮಾ ವಿದ್ಯಾರ್ಥಿನಿ ಆತ್ಮಹತ್ಯೆ
ಚಾಮರಾಜನಗರ: ನಗರದ ದೊಡ್ಡಂಗಡಿ ಬೀದಿಯ ಕೊಠಡಿಯೊಂದರಲ್ಲಿ ವಾಸವಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಸನದ ನಾಗೇಶ್ ಎಚ್.ಚನ್ನೇಗೌಡ ಹಾಗೂ ರಶ್ಮಿ ಎಂಬವರ ಪುತ್ರಿ ಮೇಘನಾ(19) ಮೃತ ಯುವತಿ.