ಕುಡಿವ ನೀರಿಗಾಗಿ ಎಲ್ಲ ಕೆರೆಗಳಿಗೆ ನೀರು
ಹಾಸನ: ಮಳೆ ನೀರಿನ ಕೊರತೆಯಿಂದ ಜಿಲ್ಲೆಯಲ್ಲಿ ತುಂಬದೇ ಇರುವ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ. 2013-14ನೇ ಸಾಲಿನ ಹೇಮಾವತಿ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಜನ-ಜಾನುವಾರುಗೆ ಕುಡಿಯುವ ನೀರಿಗಾಗಿ ಸದರಿ ಕೆರೆಗಳನ್ನು ಹೇಮಾವತಿ ನಾಲಾ ಜಾಲದಿಂದ ಹಾಗೂ ಯಗಚಿ ಎಡದಂಡೆ ನಾಲೆಯಿಂದ 2013-14 ನೇ ಸಾಲಿನಲ್ಲಿ 332 ಕೆರೆಗಳನ್ನು ಪೂರ್ಣವಾಗಿ ಇನ್ನೆರಡು ಕೆರೆಗಳನ್ನು ಭಾಗಶಃ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.