ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ'

Rashmi Kasaragodu
Updated On : 29 Nov 2013, 11:47 am

ಜಾವಗಲ್: ಪೋಷಕರು ಮತ್ತು ಸಾರ್ವಜನಿಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಒತ್ತು ನೀಡಬೇಕೆಂದು ನಿವೃತ್ತ ಶಿಕ್ಷಕ ಜೆ.ಕೆ. ವಿಶ್ವೇಶ್ವರಯ್ಯ ಕರೆ ನೀಡಿದರು.
ಜಾವಗಲ್ನಲ್ಲಿ ಬಿಸಿಸಿ ಗೆಳೆಯರ ಬಳಗ ಇತ್ತೀಚೆಗೆ ಆಯೋಜಿಸಿದ್ದ 58ನೇ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರವು ಶೈಕ್ಷಣಿಕವಾಗಿ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು. ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಸೊರಗುತ್ತಿರುವುದಕ್ಕೆ ವಿಷಾದಿಸಿದರು. ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್ ಸಮಾರಂಭ ಉದ್ಘಾಟಿಸಿ ಮಾತನಾಡಿ,  ಮನೆಗಳಲ್ಲಿ ತಂದೆ- ತಾಯಿಗಳು ಮಕ್ಕಳಿಗೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ, ಉಚ್ಛರಿಸುವುದನ್ನು ಕಲಿಸಬೇಕು. ಕನ್ನಡ ಭಾಷೆ ಪುರಾತನ ಮತ್ತು ಸಮೃದ್ಧವಾಗಿದ್ದು 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಏಕೈಕ ಭಾಷೆಯಾಗಿದೆ ಎಂದರು.
ಆಳ್ವಾಸ್ ವಿರಾಸತ್ ಜಾವಗಲ್ ಘಟಕದ ಅಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ಸಂಘಟನೆಗಳು ಗ್ರಾಮದ ಅಭಿವೃದ್ಧಿ ಬಗ್ಗೆಯು ಗಮನಹರಿಸಬೇಕೆಂದರು. ಬಿಸಿಸಿ ಗೆಳೆಯರ ಬಳಗದ ಗೌರವಾಧ್ಯಕ್ಷ ದಯಾನಂದ್, ಅಧ್ಯಕ್ಷ ಜೆ.ಜಿ. ಧರ್ಮೇಂದ್ರ, ರಾಘವೇಂದ್ರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಮಾತನಾಡಿ, ಸಂಘವು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಶುಭ ಕೋರಿದರು.
ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಶಿವಲಿಂಗಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಜೆ.ಕೆ. ಕ್ರಿಕೆಟರ್ಸ್ನ ಯಶ್ ಪಾಲಿಸಿಂಗ್, ಬಿಸಿಸಿ ಕಾರ್ಯದರ್ಶಿ ಜಗನ್ನಾಥ್ ಇದ್ದರು. ಪಟ್ಟಣದ 10ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಭಾಷೆ, ನೆಲ-ಜಲ, ಸಂಸ್ಕತಿ, ಸಾಹಿತ್ಯ ಪರಂಪರೆ ಬಗ್ಗೆ ಬೆಳಕು ಚೆಲ್ಲುವ ನಾಡಗೀತೆ, ನೃತ್ಯಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಿ ಸಾವಿರಾರು ಪ್ರೇಕ್ಷಕರ ಮನಸೂರೆಗೊಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಿದಂ ನೃತ್ಯ ಧನ್ಯ ಶಾಲೆಯ ದೀಪ ನೃತ್ಯ, ಮಾಡೆಲ್ ಶಾಲೆಯ ಹೊಯ್ಸಳ ಸಾಮ್ರಾಜ್ಯದ ನೃತ್ಯ ಸಂಗೊಳ್ಳಿ ರಾಯಣ್ಣನ ಏಕಪಾತ್ರಾಭಿನಯ ಮನೋಜ್ಞವಾಗಿ ಮೂಡಿಬಂದು ಪ್ರೇಕ್ಷಕರನ್ನು ರಂಜಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement