ರಾಗಿಯಲ್ಲಿ ಮೌಲ್ಯವರ್ಧಿತ ಉತ್ಪನ್ನದಿಂದ ಒಳ್ಳೆ ಆದಾಯ
ಕ.ಪ್ರ.ವಾರ್ತೆ ಹಾಸನ ನ.29
ರಾಗಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ಒಳ್ಳೆಯ ಆದಾಯ ಗಳಿಸಬಹುದು ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಲ್ಯ ಮಂಜುನಾಥ್ ತಿಳಿಸಿದರು.
ಕಂದಲಿಯ ಕೃಷಿ ವಿಜ್ಞಾನ ಕೇಂದ್ರ, ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿಯಲ್ಲಿ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಇತ್ತೀಚೆಗೆ ಏರ್ಪಡಿಸಿದ್ದ ಜಿಪಿಯು 66 ರಾಗಿ ತಳಿಯ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಎಸ್. ಬಸವರಾಜು ಮಾತನಾಡಿ, ರೈತರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ದೊರೆಯುವ ಸೌಲಭ್ಯಗಳನ್ನು ವಿವರಿಸಿದರಲ್ಲದೆ, ಈಗ ಬೆಳೆದಂತಹ ರಾಗಿ ಬೀಜಗಳನ್ನು ಇತರರಿಗೂ ವಿತರಿಸಲು ಸಲಹೆ ಕೊಟ್ಟರು.
ಕೃಷಿ ಇಲಾಖೆಯ ಕೃಷಿ ಅಧಿಕಾರಿ ಡಾ. ಆದರ್ಶ್ ಮಾತನಾಡಿ, ತಮ್ಮ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಿದರು ಹಾಗೂ ಜಿಪಿಯು- 66 ತಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ತಳಿಯ ಬೀಜವನ್ನು ಮೂರು ವರ್ಷಗಳವರೆಗೆ ಬಳಸಲು ಹಾಗೂ ಅಕ್ಕಪಕ್ಕದ ಹಳ್ಳಿಗಳಿಗೂ ವಿತರಿಸುವಂತೆ ಸಲಹೆ ನೀಡಿದರು.
ಕೃಷಿ ಮಹಾವಿದ್ಯಾಲಯದ ಬೇಸಾಯ ತಜ್ಞ ಡಾ. ಎಸ್.ಟಿ. ಭೈರಪ್ಪನವರ್ ಅವರು ಜಿಪಿಯು- 66 ರಾಗಿ ತಳಿಯ ವಿಶೇಷತೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಂಠೇಗೌಡರು ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಚನ್ನಕೇಶವ, ಪ್ರಾತ್ಯಕ್ಷಿಕೆಯನ್ನು ಕೈಗೊಂಡ ಶಿವನಂಜೇಗೌಡ ಮಾತನಾಡಿದರು. ಡಾ. ಟಿ.ಎಸ್. ಮಂಜುನಾಥಸ್ವಾಮಿ ಸ್ವಾಗತಿಸಿದರು. ಡಾ. ಕೃಷ್ಣಾರೆಡ್ಡಿ ವಂದಿಸಿದರು. ಡಾ. ಎಚ್.ಕೆ. ಪಂಕಜ ನಿರೂಪಿಸಿದರು. ಕ್ಷೇತ್ರೋತ್ಸವದಲ್ಲಿ ದಂಡಿಗನಹಳ್ಳಿಯ ಚಾಮರಾಜೇಗೌಡ, ಚಂದ್ರೇಗೌಡ, ಮಾದೇಗೌಡ, ಕುಮಾರಸ್ವಾಮಿ, ಪ್ರಕಾಶ್, ಯಶೋಧಮ್ಮ, ಶೈಲಜಾ ಹಾಗೂ ಸುತ್ತಮುತ್ತಲಿನ ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.