ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಕಲಚೇತನರಿಗೆ ಬೇಕಿರುವುದು ಅನುಕಂಪವಲ್ಲ

Rashmi Kasaragodu
Updated On : 29 Nov 2013, 11:48 am

ಕ.ಪ್ರ.ವಾರ್ತೆ   ಹಾಸನ   ನ.29
ಇಂದು ವಿಕಲಚೇತನರಿಗೆ ಬೇಕಿರುವ ಅನುಕಂಪವಲ್ಲ. ನಿರ್ಮಲ ಮನಸ್ಸಿನ ಸಹಕಾರ, ಪ್ರೀತಿ, ವಿಶ್ವಾಸ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ದ್ಯಾಮಪ್ಪ ಚನ್ನಣ್ಣನವರ್ ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಸಂಘ- ಸಂಸ್ಥೆಗಳ ಆಶ್ರಯ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯ ವಿಕಲಚೇತನರು ಮತ್ತು ವಿಶೇಷ ಶಾಲೆಗಳ ಮಕ್ಕಳಿಗೆ ನಾನಾ ಆಟೋಟ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇರಾಗಿದ್ದು, ವಿಕಲಚೇತನರು ತಮ್ಮ ಕೊರತೆಯ ನಡುವೆಯು ಉತ್ತಮವಾದ ಬದುಕನ್ನು ತೋರಿಸುತ್ತಿದ್ದಾರೆ. ಇವರಿಗೆ ದೈಹಿಕವಾಗಿ ಯಾವ ಅಂಗವಿಕಲತೆ ಇಲ್ಲ. ತಮ್ಮ ಶ್ರಮದಲ್ಲಿ ಜಿಲ್ಲಾ, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಪ್ರತಿಭೆ ಮೂಲಕ ಕೀರ್ತಿ ತಂದುಕೊಟ್ಟಿದ್ದಾರೆ. ವಿಕಲಚೇತನರ ಬದುಕು ಉತ್ತಮವಾಗಿ ಎಲ್ಲರ ಪ್ರೀತಿ ಸಹಕಾರದಿಂದ ಅವರ ಕೊರತೆ ದೂರವಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ವಿಕಲಚೇತನರು ಎಂಬುದು ಒಂದು ಅಂಗವಿಕಲತೆಯಲ್ಲ. ಜಿಲ್ಲೆಯ ಗಿರೀಶ್ ಅಂಗವಿಕಲರಾದರೂ ತಮ್ಮ ಸಾಧನೆ ಮೂಲಕ ಇಡೀ ರಾಷ್ಟ್ರಕ್ಕೆ ಹೆಸರು ತಂದಿದ್ದಾರೆ. ಒಬ್ಬ ಅಂಗವಿಕಲನು ಸಾಮಾನ್ಯ ಕ್ರೀಡಾಪಟುಗಿಂತ ನಾವು ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಇಂದಿನ ಕ್ರೀಡೆ ಮುಂದಿನ ಸಾಧನೆಯ ಗುರಿಯಾಗಲಿ ಎಂದು ಸಲಹೆ ನೀಡಿದರು.
ಜಿಲ್ಲೆಯ ನಾನಾ ತಾಲೂಕಿನ ಕ್ರೀಡಾಪಟುಗಳು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಿಕಲಚೇತನ ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಎಸ್. ಆಂಥೋಣಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ  ಶಿವಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ  ಎಚ್.ಸಿ. ಚಿದಾನಂದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎ.ಟಿ. ಮಲ್ಲೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement