ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರು, ಲಾರಿ ವಶ

Rashmi Kasaragodu
Updated On : 1 Dec 2013, 1:11 am

ಹೊಳೆನರಸೀಪುರ: ಕಸಾಯಿಖಾನೆಗೆ ಸಾಗಿಸಲು ಸಿದ್ಧವಾಗಿದ್ದ ಜಾನುವಾರುಗಳನ್ನು ತುಂಬಿದ್ದ ಲಾರಿಯನ್ನು ಇಲ್ಲಿನ ಎಎಸ್ಪಿ ವಿನಾಯಕ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಎಸ್ಐ ಶಿವಕುಮಾರ್ ಅವರು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿರುವ ಪ್ರಕರಣ ಶನಿವಾರ ನಡೆದಿದೆ.
ತಾಲೂಕಿನ ಜಾಂದಾಳು ಗ್ರಾಮದ ಬಳಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಲಾರಿಯನ್ನು ಪರಿಶೀಲಿಸಲಾಗಿ ಕಸಾಯಿಖಾನೆಗೆ ಸಾಗಿಸಲು ಮುಂದಾಗಿದ್ದ ಸುಮಾರು 83 ಸಾವಿರ ಮೌಲ್ಯದ 9 ಎಮ್ಮೆ, 11 ಹಸುಗಳು ಹಾಗೂ 1 ಎತ್ತುಗಳಿದ್ದ ಲಾರಿಯನ್ನು ಎಎಸ್ಪಿ ವಿನಾಯಕ ಪಾಟೀಲ್ ಅವರ ನಿರ್ದೇಶನದ ಮೇರೆಗೆ ನಗರ ಠಾಣೆ ಎಸ್ಐ ಶಿವಕುಮಾರ್ ಅವರು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾರಿಯಲ್ಲಿನ ಕಿರಿದಾದ ಸ್ಥಳದಲ್ಲಿ ಜಾನುವಾರು ತುಂಬಿದ್ದ ಪರಿಣಾಮವಾಗಿ, ಜಾನುವಾರು ಪರಸ್ಪರ ತಿವಿದಾಡಿದ್ದ ಕಾರಣದಿಂದಾಗಿ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ನಿಲ್ಲಿಸಲಾಗಿದ್ದ ಲಾರಿಯಿಂದ ಜಾನುವಾರು ರಕ್ತ ಒಸರಿ ಕೆಳಗೆ ಚೆಲ್ಲುತ್ತಿದ್ದ ದಾರುಣ ದೃಶ್ಯ ಕಂಡುಬಂತು. ಲಾರಿ ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಂಡ ನಂತರ ಪೊಲೀಸರು ಸ್ಥಳೀಯ ಪಶುವೈದ್ಯಾಧಿಕಾರಿಯಿಂದ ಜಾನುವಾರು ತಪಾಸಣೆ ನಡೆಸಿ, ನಂತರ ಮೈಸೂರಿನಲ್ಲಿರುವ ಗೋಶಾಲೆಗೆ ಜಾನುವಾರು ಸಾಗಿಸಲು ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement