7 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ
ಜಾವಗಲ್: ಪಟ್ಟಣದಲ್ಲಿ ಅ 7 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಮತ್ತು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಜಾವಗಲ್ ಘಟಕ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ನಾಗರಾಜಶೆಟ್ಟಿ ತಿಳಿಸಿದರು.
ದೇಶವಿದೇಶಗಳಿಂದ ಆಗಮಿಸುವ ಸುಮಾರು 150ಕ್ಕೂ ಹೆಚ್ಚಿನ ವಿದ್ಯಾರ್ಥಿ ಕಲಾವಿದರಿಂದ ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹದ ಬೇಟೆಯ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಹಾರಾಷ್ಟ್ರದ ಲಾವಣಿ, ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ದೋಲಚಲಮ್, ಯಕ್ಷಗಾನ, ಭರತನಾಟ್ಯ, ಕಿರುನಾಟಕ,, ಮೋಹಿನಿಯಾಟ್ಟಂ ಸೇರಿದಂತೆ ಹಲವಾರು ಅಪೂರ್ವ ಸಾಂಸ್ಕತಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು. ಜಾವಗಲ್ ಘಟಕದ ಗೌರವಾಧ್ಯಕ್ಷ ವಸಂತಕುಮಾರ್, ಪ್ರಸನ್ನಕುಮಾರ್, ಅಧ್ಯಕ್ಷ ಜೆ.ಎಂ. ಅನಿಲ್ಕುಮಾರ್, ಕೃಷ್ಣಮೂರ್ತಿ ಇತರರು ಇದ್ದರು.