ಅರ್ಬನ್ ಬ್ಯಾಂಕ್ಗೆ ರು. 11.01 ಲಕ್ಷ ಲಾಭ
ಹಾಸನ: ಬ್ಯಾಂಕಿನ ಷೇರುದಾರರ ಅಭಿಮಾನ ಮತ್ತು ಸಹಕಾರದಿಂದ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರಸಕ್ತ ವರ್ಷದಲ್ಲಿ 11,01,965 ರು. ನಿವ್ವಳ ಲಾಭ ಗಳಿಸಿದೆ ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎಸ್.ಮಂಜುನಾಥ್ ತಿಳಿಸಿದರು.
ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಅಂಗವಾಗಿ ಹಿರಿಯ ಕ್ರೀಡಾಪಟು ಎಚ್.ಟಿ.ಮಹದೇವ್ ಆಶಯದಂತೆ ಈ ವರ್ಷದಿಂದ ಪ್ರತಿ ನವೆಂಬರ್ನಲ್ಲಿ ಎಸ್ಸೆಸ್ಲೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಈ ಪರೀಕ್ಷೆಗಳಲ್ಲಿ ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಇದಕ್ಕಾಗಿ 25 ಸಾವಿರ ರು. ಗಳನ್ನು ಕಾಯ್ದಿರಿಸಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷರಾದ ಸಿ.ಪಿ.ಶಿವಲೀಲಾ ಮಾತನಾಡಿ, ಬ್ಯಾಂಕ್ ಒಟ್ಟು 5022 ಷೇರುದಾರರು ಸದಸ್ಯರನ್ನು ಹೊಂದಿ ಷೇರು ಬಂಡವಾಳ 39.89700 ರು. ಗಳಿದ್ದು, ನಿಶ್ಚಿತ ಠೇವಣಿ 15.50 ಕೋಟಿ ರು. ಗಳಾಗಿದ್ದು, ಒಟ್ಟಾರೆ ಬ್ಯಾಂಕಿನ ದುಡಿಯುವ ಬಂಡವಾಳದ ಹಣವು 19.67 ಕೋಟಿ ರು. ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲಾ ಸದಸ್ಯರಿಗೂ ಸಾಲದ ಪೂರೈಕೆಯನ್ನು ಬ್ಯಾಂಕಿನ ಬಂಡವಾಳದಿಂದಲೇ ನೀಡಲಾಗಿದ್ದು, ಇದು ಬ್ಯಾಂಕಿನ ಎಲ್ಲಾ ಸದಸ್ಯರಿಗೂ ಆಡಳಿತ ಮಂಡಲಿಗೂ ಮತ್ತು ಅಧಿಕಾರಿಗಳು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಾಲ ಮರುಪಾವತಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಈಗಾಗಲೇ ಬಿ. ವರ್ಗಕ್ಕೆ ಸೇರಿರುವ ಬ್ಯಾಂಕಿನ ನಿವ್ವಳ ಎನ್.ಪಿ.ಎ. ಪ್ರಮಾಣವು ಶೇ.0 ಇಳಿಸುವ ಮೂಲಕ ಬ್ಯಾಂಕನ್ನು ಎ ವರ್ಗಕ್ಕೆ ಪರಿಗಣಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಸದಸ್ಯರಲ್ಲಿ ಮನವಿ ಮಾಡಿದರು.
ಬ್ಯಾಂಕ್ ವ್ಯವಸ್ಥಾಪಕ ಸದಾಶಿವಪ್ಪ ವಾರ್ಶಿಕ ವರದಿ ಮಂಡಿಸಿದರು. ರುದ್ರಮುನಿಸ್ವಾಮಿ, ವಕೀಲ ನಂದೀಶ್ ಉಮಾಪತಿಸ್ವಾಮಿ ಎಚ್ಡಿಡಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಸಿದ್ದಯ್ಯ ಇತರರು ಮಾತನಾಡಿದರು. ನಿರ್ದೇಶಕ ಕೆ.ರಮೇಶ್, ಟಿ.ಎಲ್.ಚಿಕ್ಕಣ್ಣ, ಬಿ.ಎಸ್. ಅಬ್ದುಲ್ಜಮೀಲ್, ಕಾನೂನು ಸಲಹೆಗಾರ ವೈ.ಬಿ.ಚಂದ್ರಶೇಖರ್ ಹಾಜರಿದ್ದರು.