ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಣೇಶಮೂರ್ತಿ ವಿಸರ್ಜನ ಮಹೋತ್ಸವ

Rashmi Kasaragodu
Updated On : 2 Oct 2013, 1:30 am

ಹಾರನಹಳ್ಳಿ: ಇಲ್ಲಿನ ಒಕ್ಕಲಿಗರ ಸಂಘ ಹಾಗೂ ವಿನಾಯಕ ಭಕ್ತ ಮಂಡಳಿಯಿಂದ ಸ್ಥಾಪಿಸಲಾಗಿದ್ದ  ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ಸೋಮವಾರ ರಾತ್ರಿ  ವೈಭವದಿಂದ ನಡೆಯಿತು.
ಹಾರನಹಳ್ಳಿ ಗ್ರಾಮದೇವತೆ ಕೋಡಮ್ಮ, ಯಳವಾರೆ ಗ್ರಾಮದೇವತೆ ಹುಚ್ಚಮ್ಮದೇವಿ ಹಾಗೂ ಗಣಪತಿಯನ್ನು ಕುಳ್ಳಿರಿಸಿ ಹಾರನಹಳ್ಳಿ ಗ್ರಾಮದಲ್ಲಿ ಉತ್ಸವ ನಡೆಸಲಾಯಿತು.
ಉತ್ಸವದಲ್ಲಿ ಕೀಲು ಕುದುರೆ, ಡ್ರಮ್ಸೆಟಟ್ವಾದ್ಯ, ಕರಡೆ ಮಜಲು ಉತ್ಸವಕ್ಕೆ ಮೆರಗು ನೀಡಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಂಕಜ ಹಾಗೂ ಒಕ್ಕಲಿಗ ಸಮಾಜದ ಕೆಂಪರಾಜು, ಕೃಷ್ಣಮೂರ್ತಿ, ಸುರೇಶ್, ದೇವರಾಜು, ರಂಗನಾಥ್, ಸಮಾಜ ಬಾಂಧವರು ಹಾಗೂ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಹಾರನಹಳ್ಳಿ ದೊಡ್ಡಕೆರೆಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement