ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚನ್ನರಾಯಪಟ್ಟಣ: ಗುರುರಾಯರ ಧ್ಯಾನ ಮಂದಿರ ನಿರ್ಮಾಣ

Rashmi Kasaragodu
Updated On : 2 Oct 2013, 1:36 am

ಚನ್ನರಾಯಪಟ್ಟಣ: ಪಟ್ಟಣದ ಕೋಟೆ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ 65 ಲಕ್ಷ ರು. ವೆಚ್ಚದಲ್ಲಿ ಗುರುರಾಯರ ಧ್ಯಾನ ಮಂದಿರ ನಿರ್ಮಿಸಲಾಗಿದೆ. ಇಲ್ಲಿ ಸಂಗೀತ, ಲಲಿತಕಲೆ, ಯೋಗ, ವಯೋವೃದ್ಧರಿಗೂ ಧ್ಯಾನಕ್ಕೆ ಅನುಕೂಲತೆ ಇತ್ಯಾದಿ ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಲಾಗುವುದು. ಶ್ರೀ ಮಠದವತಿಯಿಂದ ಪಾಠ ಹಾಗೂ ತರಬೇತಿ ನೀಡುವ ವ್ಯವಸ್ಥೆಗೊಳಿಸುವುದಾಗಿ ಮಠದ ಅಧ್ಯಕ್ಷ ಸಿ. ವಿ. ರಾಜಪ್ಪ ಹಾಗೂ ಸಮಿತಿಯವರು ಚಿಂತಿಸಿದ್ದಾರೆ ಎಂದು ಸಹಕಾರ್ಯದರ್ಶಿ ಸಿ. ಬಿ. ರಾಜು (ಬಸವರಾಜು) ತಿಳಿಸಿದ್ದಾರೆ. ಧ್ಯಾನ ಮಂದಿರವನ್ನು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ  ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಉದ್ಘಾಟಿಸಲಿದ್ದಾರೆ. ಅ. 8 ರ ಸಂಜೆ 5 ಕ್ಕೆ  ಪಟ್ಟಣದ ಕೆ.ಆರ್.ವೃತ್ತದಿಂದ ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಮಂದಿರಕ್ಕೆ ಕರೆತರಲಾಗುವುದು. ಅ.9 ಬೆಳಗ್ಗೆ 11.30ಕ್ಕೆ ಉದ್ಘಾಟನೆ. ವಿಶೇಷ ಆಹ್ವಾನಿತರಾಗಿ ಶಾಸಕ ಬಾಲಕೃಷ್ಣ ಭಾಗವಹಿಸುವರು.
ಸ್ಪರ್ಧೆ: ವಿಜೇತರಿಗೆ ಬಹುಮಾನ
ಚನ್ನರಾಯಪಟ್ಟಣ: ತಾಲೂಕಿನ ಮಟ್ಟನವಿಲೆಯ ಹೇರಂಭ ಸ್ನೇಹ ಬಳಗದವರು ಗಣಪತಿ ಉತ್ಸವ ಅಂಗವಾಗಿ ರಂಗೋಲಿ, ಮಡಿಕೆ ಒಡೆಯುವುದು, ಮೂಜಿಕಲ್ ಛೇರ್ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪುರುಷರು, ಸ್ತ್ರೀಯರು ಹಾಗೂ ಮಕ್ಕಳ ವಿಭಾಗದಲ್ಲಿ ಪ್ರತಿ ಆಟ ಏರ್ಪಡಿಸಿದ್ದು ವಿಜೇತಗೆ ಸಂಘದ ಅಧ್ಯಕ್ಷ ಎಂ. ಜೆ. ಮಂಜುನಾಥ್ ಬಹುಮಾನ ವಿತರಿಸಿದರು. ಉಪಾಧ್ಯಕ್ಷ ಕೃಷ್ಣ, ಎಂ. ಎನ್. ಸ್ವಾಮಿ, ಯೋಗೀಶ್ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement