ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ: ಬಂಧನ

Rashmi Kasaragodu
Updated On : 2 Oct 2013, 1:35 am

ಬೇಲೂರು: ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವು ತಿಳಿದ ಪೊಲೀಸರು ದಾಳಿ ನಡೆಸಿ 20 ಸಾವಿರ ರು. ಮೌಲ್ಯದ ಮದ್ಯ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಬೇಲೂರು ಠಾಣೆ ವ್ಯಾಪ್ತಿಯ ಗೆಂಡೇಹಳ್ಳಿ ರಸ್ತೆಯಲ್ಲಿರುವ ಮರೂರು ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ  ಪ್ರಾವಿಜನ್ ಸ್ಟೋರ್ವೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಶನಿವಾರ ರಾತ್ರಿ    ಪ್ರಾವಿಜನ್ ಸ್ಟೋರ್ಗೆ ಪೊಲೀಸರು ದಾಳಿ ನಡೆಸಿದರು. ಅಂಗಡಿ ಪಕ್ಕದಲ್ಲಿ ಗೋದಾಮಿನಲ್ಲಿ ಅಂದಾಜು 20 ಸಾವಿರ ರುಪಾಯಿಯ 45 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ವಿರೂಪಾಕ್ಷನನ್ನು  ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement