ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಕೀಲರ ಸಂಘದಲ್ಲಿ ಗಾಂಧಿ ಜಯಂತಿ

Rashmi Kasaragodu
Updated On : 2 Oct 2013, 1:31 am

ಹಾಸನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಅ. 2 ರಂದು ಬೆಳಗ್ಗೆ 10 ಕ್ಕೆ  ಜಿಲ್ಲಾ ವಕೀಲರ ಸಂಘದಲ್ಲಿ ಗಾಂಧಿ ಜಯಂತಿ ಹಾಗೂ ಮಧ್ಯಸ್ಥಿಕೆ ಮತ್ತು ಸಮಾಲೋಚನೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ  ಜೆ.ಎಸ್.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ  ಅಧ್ಯಕ್ಷತೆ ವಹಿಸುವರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮುಸ್ತಫಾ ಹುಸೇನ್ ಹಾಗೂ ನ್ಯಾ. ಆರ್.ಡಿ.ಹುದ್ದಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ಹಾಸನ: ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಅಲುಮಿನಿ ಸಭಾಂಗಣದಲ್ಲಿ ಕಾಲೇಜಿನ ರೋಟರ್ಯಾಕ್ಟ್ ಸಂಘದ ಪದಗ್ರಹಣ ನಡೆಯಿತು. 2013-14ನೇ ಸಾಲಿನ ಮಲೆನಾಡು ಕಾಲೇಜು ರೋಟರ್ಯಾಕ್ಟ್ ಅಧ್ಯಕ್ಷರಾಗಿ  ಆಯ್ಕೆಯಾಗಿರುವ ಬಿ.ಪಿ. ಸುಧೀರ್ ಪೈ, ಕಾರ್ಯದರ್ಶಿ ವಿದ್ಯಾ ಮತ್ತು ಸಂಘದ ಇತರ ಅಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಪಿ.ಡಿ.ಜಿ.ಎಮ್.ಕೆ. ಗೋವರ್ಧನ್ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ  ಬೋಧಿಸಿದರು. ಹಾಸನ ರೋಟರಿ ಅಧ್ಯಕ್ಷ ಎಚ್.ಆರ್. ಮದನ್ಕುಮಾರ್, ಕಾಲೇಜು ರೋಟರ್ಯಾಕ್ಟ್ ಸಂಚಾಲಕ ಪಾಲಾಕ್ಷ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement