ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಾಂಧೀಜಿ ಚಿತಾಭಸ್ಮ ಸಮಾಧಿಗೆ ಪೂಜೆ

Rashmi Kasaragodu
Updated On : 3 Oct 2013, 12:23 pm

ಕ.ಪ್ರ.ವಾರ್ತೆ    ಅರಸೀಕೆರೆ    ಅ.2
ಗಾಂಧೀಜಿಯವರ ಆದರ್ಶ ತತ್ವ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕೆಂದು ತಹಶೀಲ್ದಾರ್ ಕೇಶವಮೂರ್ತಿ ಕರೆ ನೀಡಿದರು.
ಪಟ್ಟಣದ ಹೊರವಲಯದ ಕಸ್ತೂರಬಾ ಟ್ರಸ್ಟ್ನಲ್ಲಿರುವ ಗಾಂಧೀಜಿ ಚಿತಾಭಸ್ಮ ಸಮಾಧಿಗೆ ಬುಧವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಗಾಂಧೀಜಿಯವರ ಹೋರಾಟ ಎಲ್ಲರಿಗೂ ಮಾದರಿ. ಬಾಲ್ಯದಲ್ಲಿಯೇ ಸತ್ಯಹರಿಶ್ಚಂದ್ರ, ಶ್ರವಣಕುಮಾರನ ಪಿತೃಭಕ್ತಿ ಮುಂತಾದ ನಾಟಕಗಳು ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಭಗವದ್ಗೀತೆ, ಖುರಾನ್, ಬೈಬಲ್ ಓದಿ ಅದರಂತೆ ಜೀವನ ನಡೆಸಬೇಕೆಂದು ಭಾವಿಸಿದವರಲ್ಲಿ ಗಾಂಧೀಜಿ ಒಬ್ಬರೆಂದು ಗುಣಗಾನ ಮಾಡಿದರು.ಲಾಲ್ಬಹದ್ದೂರ್ ಶಾಸ್ತ್ರಿ ದೇಶಕಂಡ ಪ್ರಾಮಾಣಿಕ ಪ್ರಧಾನಿಗಳಲ್ಲಿ ಒಬ್ಬರು. ಅವರ ಜೀವನಾದರ್ಶ,ಮೌಲ್ಯಗಳು ಇತರರಿಗೆ ಮಾದರಿಯಾಗಿದೆ ಎಂದರು.
ಕರವೇ ತಾಲೂಕು  ಅಧ್ಯಕ್ಷ ಹೇಮಂತ್ಕುಮಾರ್, ಉಪ ತಹಶೀಲ್ದಾರ್ ಪಾಲಾಕ್ಷ, ಕರವೇ ನಗರಾಧ್ಯಕ್ಷ ಕಿರಣ್ ಹಾಗೂ ಕರವೇ ಕಾರ್ಯಕರ್ತರು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ, ನಮೋ ಸಂಘಟನೆ ಹಾಗೂ ನಾನಾ ಸಂಘಟನೆ ಕಾರ್ಯಕರ್ತರು, ಕಸ್ತೂರಬಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement