ತಾ.ನಲ್ಲಿ ಗಾಂಧೀಜಿ ಚಿತಾಭಸ್ಮ ಸಮಾಧಿ: ಸಂತಸದ ಸಂಗತಿ
ಅರಸೀಕೆರೆ: ಮಹಾತ್ಮ ಗಾಂಧೀಜಿಯವರ ಚಿತಾಭಸ್ಮದ ಸಮಾಧಿ ನಮ್ಮ ತಾಲೂಕಿನಲ್ಲಿರುವುದು ಸಂತೋಷದ ಸಂಗತಿ. ಇಂತಹ ಪುಣ್ಯಸ್ಥಳದಲ್ಲಿ ಗಾಂಧೀ ಜಯಂತಿ ಆಚರಿಸಲು ಶಿಕ್ಷಣ ಇಲಾಖೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ಪಟ್ಟಣದ ಹೊರವಲಯದ ಕಸ್ತೂರಬಾ ಟ್ರಸ್ಟ್ನಲ್ಲಿರುವ ಗಾಂಧೀಜಿ ಚಿತಾಭಸ್ಮ ಸಮಾಧಿಗೆ ಬುಧವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಜಿ ಸಚಿವೆ ದಿ.ಯಶೋಧರಮ್ಮ ದಾಸಪ್ಪ ಅವರ ಅವಿರತ ಶ್ರಮದಿಂದ ಚಿತಾಭಸ್ಮದ ಸಮಾದಿ ಬರಲು ಸಾಧ್ಯವಾಗಿದ್ದು ಅವರು ಕಂಡ ಕನಸುಗಳು ನನಸಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಮಾಜಿ ಉಪಾಧ್ಯಕ್ಷ ರಾಜಶೇಖರ್, ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ರಾಮಯ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಆರ್.ಅನಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ .ನಟರಾಜ್ ಇನ್ನು ಮುಂತಾದವರು ಇದ್ದರು.